ಅಂಗನವಾಡಿ ನೌಕರರ ರಾಷ್ಟ್ರವ್ಯಾಪ್ತಿಮುಷ್ಕರಕ್ಕೆ ಜಿಲ್ಲಾ ಸಂಘದ ಬೆಂಬಲ
Update: 2018-01-15 21:34 IST
ಉಡುಪಿ, ಜ.15: ಬುಧವಾರ ರಾಷ್ಟ್ರವ್ಯಾಪ್ತಿ ನಡೆಯುವ ಅಂಗನವಾಡಿ ನೌಕರರ ಒಂದು ದಿನದ ಮುಷ್ಕರಕ್ಕೆ ಉಡುಪಿ ತಾಲೂಕು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘವು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ.
ಆ ದಿನದಂದು ಉಡುಪಿ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಕಾರ್ಯಕರ್ತೆ ಮತ್ತು ಸಹಾಯಕಿಯರು ತಮ್ಮ ಬೇಡಿಕೆಗಳ ಮನವಿಯನ್ನು ಉಡುಪಿ ತಹಶೀಲ್ದಾರರ ಮೂಲಕ ಶಾಸಕರಿಗೆ, ಮುಖ್ಯಮಂತ್ರಿಗಳಿಗೆ, ಇಲಾಖಾ ಸಚಿವೆಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಿದ್ದಾರೆ ಎಂದು ತಾಲೂಕು ಸಂಘದ ಅಧ್ಯಕ್ಷೆ ಯಮುನಾ ಆರ್.ಕುಂದರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.