ಮರದಿಂದ ಬಿದ್ದು ಮನೆಯಲ್ಲೇ ಇರುವವರ ‘ಸ್ನೇಹ ಸಮ್ಮಿಲನ’

Update: 2018-01-15 16:08 GMT

ಮಂಗಳೂರು, ಜ. 15: ತೆಂಗು, ಕಂಗು, ಮಾವು ಇತ್ಯಾದಿ ಮರಗಳಿಂದ ಬಿದ್ದು ಗಾಯಗೊಂಡು ಸೊಂಟದ ಕೆಳಗೆ ಬಲಹೀನರಾಗಿ ಮನೆಯಲ್ಲೇ ಇರುವವರ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮವು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಡೆಯಲಿದೆ.

ಸದರಿ ಸ್ನೇಹಸ್ಮುಲನದಲ್ಲಿ ಭಾಗವಹಿಸುವವರಿಗೆ ಮನೋರಂಜನೆಯ ಆಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅವರಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ಅವಕಾಶವನ್ನು ನೀಡಲಾಗುವುದು. ಅಲ್ಲದೆ ಅವರನ್ನು ಮಾಲ್, ಪಾರ್ಕ್ ಅಥವಾ ಬೀಚ್‌ನಲ್ಲಿ ಸುತ್ತಾಡಿಸಲಾಗುವುದು. ಅವರನ್ನು ಆರೈಕೆ ಮಾಡುತ್ತಿರುವ ತಾಯಿ, ತಂದೆ ಅಥವಾ ಇನ್ನಿತರ ಬಂಧುಗಳನ್ನು ಸದರಿ ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುವುದು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಕರೆ ಮಾಡಿ ತಮ್ಮ ಹೆಸರನ್ನು ನೋಂದಾುಸಬೇಕು. ಯಾವುದಾದರೂ ಪ್ರತಿಭೆ ಇದ್ದಲ್ಲಿ ಅದನ್ನು ತಿಳಿಸಬೇಕು. ಸ್ನೇಹ ಸಮ್ಮಿಲನದ ದಿನಾಂಕ ಮತ್ತು ಸ್ಥಳವನ್ನು ಮುಂದಕ್ಕೆ ತಿಳಿಸಲಾಗುವುದು.

ಅದೆಷ್ಟೋ ವರ್ಷಗಳಿಂದ ಮನೆಯೊಳಗೆ ಬಾಕಿಯಾಗಿ ಹೊರಜಗತ್ತನ್ನೇ ಕಾಣದವರರಿಗೆ ಕನಿಷ್ಠ ಒಂದು ದಿನವನ್ನಾದರೂ ಸಂತೋಷದಿಂದ ಕಳೆಯುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಪತ್ರಿಕಾ ಓದುಗರು ಸಂಬಂಧಿತ ವ್ಯಕ್ತಿಗಳಿಗೆ ಈ ಷಯವನ್ನು ತಿಳಿಸಿ ಅವರ ಮಾಹಿತಿಯನ್ನು ನೀಡಿ ಸಹಕರಿಸುವಂತೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಪತ್ರಿಕಾ ಪ್ರಕಟನೆಯಲ್ಲಿ ನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2, ದೂರವಾಣಿ-0824-4267883, 9972283365 ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News