ಮಲ್ಪೆ; ಜಾರ್ಖಂಡ್ ಮೀನುಗಾರನ ಸಂಶಯಾಸ್ಪದ ಸಾವು: ದೂರು
Update: 2018-01-15 22:18 IST
ಮಲ್ಪೆ, ಜ.15: ಜಾರ್ಖಂಡ್ ಮೂಲದ ಮೀನುಗಾರರೊಬ್ಬರು ಮಲ್ಪೆ ಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಮಲ್ಪೆ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾರ್ಖಂಡ್ ರಾಜ್ಯದ ರಂಜಿತ್ ಎಕ್ಕಾ(35) ಎಂಬವರು ಮೃತ ಮೀನು ಗಾರ. ಕಳೆದ ಐದು ತಿಂಗಳುಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು ಮಲ್ಪೆಯ ಕಾರ್ತಿಕ್ ಬಿಲ್ಡಿಂಗ್‌ನಲ್ಲಿರುವ ಬಾಡಿಗೆ ರೂಮಿನಲ್ಲಿ ತನ್ನ ಊರಿನ ಇತರರ ಜೊತೆ ವಾಸವಾಗಿದ್ದರು.
ಜ.14ರಂದು ಬೆಳಗ್ಗೆ 6:30ರ ಸುಮಾರಿಗೆ ರಂಜಿತ್ ಕಾರ್ತಿಕ್ ಬಿಲ್ಡಿಂಗ್‌ನ ಹೊರಗಡೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಜ.13 ರಂದು ರಾತ್ರಿ 9ಗಂಟೆಗೆ ರೂಮಿನಿಂದ ಹೊರಗಡೆ ಹೋಗಿದ್ದ ರಂಜಿತ್ ಯಾವುದೋ ಕಾರಣದಿಂದ ಮೃತಪಟ್ಟಿದ್ದು, ಆತನ ಸಾವಿನಲ್ಲಿ ಅನುಮಾನವಿರು ವುದಾಗಿ ಮೃತರ ಸಹೋದರ ಪ್ರಪುಲ್ಲಾ ಕುಜುರ್ ಮಲ್ಪೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.