×
Ad

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ವರ್ಧಮಾನ’ ಸಮಾರೋಪ

Update: 2018-01-15 22:21 IST

ಬೈಂದೂರು, ಜ.15: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಖಂಬದಕೋಣೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ 12ನೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ‘ವರ್ಧಮಾನ-2018’ ಸಮಾರೋಪ ಸಮಾರಂಭ ರವಿವಾರ ಜರಗಿತು.

ಸಮಾರೋಪ ಭಾಷಣ ಮಾಡಿದ ಹಿರಿಯ ಪತ್ರಕರ್ತ ಎ.ಈಶ್ವರಯ್ಯ, ಯುವ ಜನತೆಯಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಿದೆ. ಇದು ಸಾಹಿತ್ಯ ಕ್ಷೇತ್ರದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಭಾಷೆ ಉಳಿಯ ಬೇಕಾದರೆ ಹೊಸ ಪದಗಳ ಸೃಷ್ಠಿಯಾಗಬೇಕು. ಯುವ ಜನತೆಯಲ್ಲಿ ಭಾಷೆಯ ಮೇಲಿನ ಪ್ರೀತಿ ಮತ್ತು ಹೋರಾಡುವ ಕಿಚ್ಚು ಹೆಚ್ಚಾಗಬೇಕಾಗಿದೆ. ಸರಕಾರ ಕನ್ನಡದಲ್ಲಿ ಕಲಿತವರಿಗೆ ಉದ್ಯೋಗಾವಕಾಶದಂತಹ ಪ್ರೋತ್ಸಾಹ ಯೋಜನೆ ಗಳನ್ನು ರೂಪಿಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಈ ಸಂದರ್ಭದಲ್ಲಿ ಮುಲ್ಲಡ್ಕ ಗುರುಪ್ರಸಾದ ಸುಧಾಕರ ಶೆಟ್ಟಿ, ಎನ್.ಗುರುರಾಜ ಮಣಿಪಾಲ, ಗುರುವ ಕೊರಗ ಹಿರಿಯಡ್ಕ, ಕುಂದಾ ಪುರ ವೆಂಕಟೇಶ ಪೈ ಮುಂಬೈ, ಚಂದ್ರಾಕರ ಕಾಮತ್, ಯಾಕೂಬ್ ಖಾದರ್ ಗುಲ್ವಾಡಿ, ತಲ್ಲೂರು ಶಿವರಾಮ ಶೆಟ್ಟಿ, ಯು.ಎಸ್.ಶೆಣೈ, ಸುಹೇಲ್ ಬಾಷಾ ಸಾಹೇಬ್, ಚಂದ್ರನಾಥ ಬಜಗೋಳಿ, ಮಂಜುನಾಥ ಮಧ್ಯಸ್ಥ, ಮ.ನಾ. ಹೆಬ್ಬಾರ್, ವಾಗ್ಜೋತಿ ಶ್ರವಣ ದೋಷಪುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಇವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಡಾ.ಎಚ್.ಶಾಂತರಾಮ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ವಿಶ್ರಾಂತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ, ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲ ಉಮೇಶ ಎನ್.ರಾಯ್ಕರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಕುಲ ಶೆಟ್ಟಿ, ಹಿರಿಯ ಸಹಕಾರಿ ಸಂತೋಷಕುಮಾರ ಶೆಟ್ಟಿ ಹಕ್ಲಾಡಿ, ತಾಪಂ ಸದಸ್ಯಜಗದೀಶ ದೇವಾಡಿಗ, ಉಡುಪಿ ಜಿಲ್ಲಾ ಗ್ರಂಥಾಲಯಾ ಧಿಕಾರಿ ನಳಿನಿ, ಉಡುಪಿ ಡಯಟ್ ಪ್ರಾಂಶುಪಾಲ ಚಂದ್ರಶೇಖರ, ಕೆರ್ಗಾಲು ಗ್ರಾಪಂ ಉಪಾಧ್ಯಕ್ಷ ಸುಂದರ ಕೊಠಾರಿ, ಉದ್ಯಮಿ ಉದಯಕುಮಾರ ಶೆಟ್ಟಿ, ನಾಯ್ಕನಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಪೈ ಉಪಸ್ಥಿತರಿದ್ದರು.

ಡಾ.ಸುಧಾಕರ ದೇವಾಡಿಗ ಸ್ವಾಗತಿಸಿದರು. ಸುಧಾಕರ ಶೆಣೈ ವಂದಿಸಿದರು. ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News