×
Ad

ಬನ್ನಡ್ಕ: ಅಟೋರಿಕ್ಷಾ ತಂಗುದಾಣ ಮೇಲ್ಛಾಚಣಿ,ಇಂಟರ್‌ಲಾಕ್ ಉದ್ಘಾಟನೆ

Update: 2018-01-15 22:30 IST

ಮಂಗಳೂರು, ಜ. 15: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾರವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಜಂಕ್ಷನ್ ಬಳಿ ಅಟೋರಿಕ್ಷಾ ತಂಗುದಾಣ ಮೇಲ್ಛಾಚಣಿ ಹಾಗೂ ಇಂಟರ್‌ಲಾಕ್ ಕಾಮಗಾರಿ ಉದ್ಘಾಟನೆಗೊಂಡಿತು.

ರಿಕ್ಷಾ ಚಾಲಕರುಗಳು ಸಮಾಜದ ರಾಯಭಾರಿಗಳು. ಸಮಾಜ ಸೇವೆಗೆ ರಿಕ್ಷಾ ಚಾಲಕರು ಸದಾ ಸಿದ್ಧರಾಗಿರಬೇಕು. ಅಸಂಘಟಿತ ಕಾರ್ಮಿಕರಿಗೆ ಸರಕಾರದ ವಿವಿಧ ಯೋಜನೆಗಳು ಲಭ್ಯವಿದ್ದರೂ ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ನಿವಾಸ ಸುವರ್ಣ, ಗ್ರಾ. ಪಂ. ಸದಸ್ಯ ಸೂರಜ್ ಬನ್ನಡ್ಕ, ಅಭಿನಂದನ್ ಬಳ್ಳಾಲ್, ದಯಾನಂದ, ರವಿ, ಉಮೇಶ್, ಶೋಭಾ ದಿನೇಶ್, ಶೋಭಾ ವಸಂತ್, ಸ್ಥಳೀಯ ದೇವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್ ಬಳ್ಳಾಲ್, ಬನ್ನಡ್ಕ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದ ಅಧ್ಯಕ್ಷ ವಿಜಯ ಕುಮಾರ್ ಜೈನ್ ಮತ್ತು ಸರ್ವ ಸದಸ್ಯರು, ವಕೀಲರಾದ ಪ್ರಕಾಶ್ ಬಿ., ಹರೀಶ್‌ಬಿ., ಪಧ್ಮರಾಜ ಜೈನ್, ಆಲ್ವಿನ್ ಡಿಸೋಜಾ, ಶಿಕ್ಷಕರಾದ ಸುರೇಶ್ ಭಂಡಾರಿ ನವೀನ್ ಅಂಬೋರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News