ಮಡಗಾಸ್ಕರ್ ಚಂಡಮಾರುತ: ಮೃತರ ಸಂಖ್ಯೆ 51ಕ್ಕೇರಿಕೆ
Update: 2018-01-15 22:32 IST
ಅಂಟಾನನವ್ರೊ (ಮಡಗಾಸ್ಕರ್), ಜ. 15: 10 ದಿನಗಳ ಹಿಂದೆ ಮಡಗಾಸ್ಕರ್‌ಗೆ ಅಪ್ಪಳಿಸಿದ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 51ಕ್ಕೇರಿದೆ ಹಾಗೂ 22 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
‘ಅವಾ’ ಚಂಡಮಾರುತ ಜನವರಿ 5-6ರಂದು ಮಡಗಾಸ್ಕರ್ ಮೂಲಕ ಹಾದು ಹೋಗಿತ್ತು. ಚಂಡಮಾರುತವು ಈ ದ್ವೀಪದ ಮೂಲಕ ಹಾದುಹೋಗಾದ ಗಾಳಿಯ ವೇಗ ಗಂಟೆಗೆ 140ರಿಂದ 190 ಕಿ.ಮೀ.ಗಳಷ್ಟಿತ್ತು.
ಚಂಡಮಾರುತದಿಂದಾಗಿ 54,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.