ಭಾರತದ ವಿರುದ್ಧ ಅಮೆರಿಕಕ್ಕೆ ದೂರು ನೀಡಿದ ಪಾಕ್

Update: 2018-01-15 17:08 GMT

ಇಸ್ಲಾಮಾಬಾದ್, ಜ. 15: ಭಾರತೀಯ ಸೇನಾ ಮುಖ್ಯಸ್ಥರ ‘ಬೇಜವಾಬ್ದಾರಿಯ’ ಹೇಳಿಕೆಗಳು ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ‘ಉದ್ವಿಗ್ನತೆ ಹೆಚ್ಚಳ’ದ ವಿರುದ್ಧ ಸೋಮವಾರ ಪಾಕಿಸ್ತಾನ ಅಮೆರಿಕಕ್ಕೆ ದೂರು ನೀಡಿದೆ ಹಾಗೂ ಸಂಯಮ ಕಾಪಾಡಿಕೊಳ್ಳುವಂತೆ ಭಾರತಕ್ಕೆ ‘ಬುದ್ಧಿ ಹೇಳುವಂತೆ’ ಒತ್ತಾಯಿಸಿದೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಅಮೆರಿಕದ ಉಸ್ತುವಾರಿ ಸಹಾಯಕ ವಿದೇಶ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಜೊತೆಗಿನ ಮಾತುಕತೆಯ ವೇಳೆ ಪಾಕಿಸ್ತಾನದ ವಿದೇಶ ಕಾರ್ಯದರ್ಶಿ ತೆಹ್ಮೀನಾ ಜಂಜುವ ಈ ವಿಷಯ ಪ್ರಸ್ತಾಪಿಸಿದರು.

ರವಿವಾರ ರಾತ್ರಿ ಹಲವಾರು ಪಾಕಿಸ್ತಾನಿ ಸೈನಿಕರ ಸಾವಿಗೆ ಕಾರಣವಾದ ಭಾರತೀಯ ಮೋರ್ಟರ್ ದಾಳಿಗಳನ್ನೂ ಜಂಜುವ ಖಂಡಿಸಿದರು.

‘‘ಸಂಯಮ ವಹಿಸುವಂತೆ ಹಾಗೂ ಉದ್ವಿಗ್ನತೆಯನ್ನು ಹೆಚ್ಚಿಸುವ ತಂತ್ರಗಳನ್ನು ನಿಲ್ಲಿಸುವಂತೆ ಭಾರತಕ್ಕೆ ಸಲಹೆ ನೀಡುವಂತೆ ಜಂಜುವ ಅಮೆರಿಕವನ್ನು ಒತ್ತಾಯಿಸಿದರು’’ ಎಂದು ಸಭೆಯ ಬಳಿಕ ಪಾಕಿಸ್ತಾನದ ವಿದೇಶ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News