ಇರಾನ್ ನಲ್ಲಿ ಪ್ರತಿಭಟನೆಗಳ ವೇಳೆ 25 ಸಾವು: ನ್ಯಾಯಾಲಯ

Update: 2018-01-15 17:25 GMT

ಟೆಹರಾನ್, ಜ. 15: ಇರಾನ್‌ನಾದ್ಯಂತ ಹಲವಾರು ನಗರಗಗಳು ಮತ್ತು ಪಟ್ಟಣಗಳಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಒಟ್ಟು 25 ಮಂದಿ ಮೃತಪಟ್ಟಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿಗಳು ರವಿವಾರ ಹೇಳಿದ್ದಾರೆ. 465 ಮಂದಿ ಈಗಲೂ ಬಂಧನದಲ್ಲಿದ್ದಾರೆ.

‘‘ನಾಗರಿಕರು ಮತ್ತು ಭದ್ರತಾ ಪಡೆ ಸಿಬ್ಬಂದಿ ಸೇರಿದಂತೆ 25 ಮಂದಿ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದ್ದಾರೆ’’ ಎಂದು ನ್ಯಾಯಾಂಗದ ವಕ್ತಾರರೊಬ್ಬರು ಹೇಳಿದ್ದಾರೆ ಎಂದು ‘ಮಿಝನ್‌ಆನ್‌ಲೈನ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಈ ಪೈಕಿ ಯಾರೊಬ್ಬರೂ ಭದ್ರತಾ ಪಡೆಗಳ ಗುಂಡೇಟಿನಿಂದ ಮೃತಪಟ್ಟಿಲ್ಲ. ಯಾಕೆಂದರೆ, ಪ್ರತಿಭಟನಕಾರರ ಮೇಲೆ ಗುಂಡು ಹಾರಿಸದಂತೆ ಪಡೆಗಳಿಗೆ ಸೂಚನೆ ನೀಡಲಾಗಿತ್ತು’’ ಎಂದು ಅವರು ತಿಳಿಸಿದರು.

ಆದಾಗ್ಯೂ, ಪ್ರತಿಭಟನೆಗಳ ವೇಳೆ ನಾಗರಿಕರು ಮತ್ತು ಸೈನಿಕರು ಹೇಗೆ ಸಾವನ್ನಪ್ಪಿದರು ಎಂಬ ಬಗ್ಗೆ ವಿವರಗಳನ್ನು ಅವರು ನೀಡಿಲ್ಲ.

ಡಿಸೆಂಬರ್ 28 ಮತ್ತು ಜನವರಿ 1ರ ನಡುವೆ ಇರಾನ್‌ನಲ್ಲಿ ಪ್ರತಿಭಟನೆಗಳು ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News