ಫಿಲಿಪ್ಪೀನ್ಸ್: ಜ್ವಾಲಾಮುಖಿಯಿಂದ ಹೊರಸೂಸುತ್ತಿರುವ ಲಾವಾ

Update: 2018-01-15 17:28 GMT

ಕ್ಯಾಮಲಿಗ್ (ಫಿಲಿಪ್ಪೀನ್ಸ್), ಜ. 15: ಫಿಲಿಪ್ಪೀನ್ಸ್‌ನ ಜ್ವಾಲಾಮುಖಿಯೊಂದರಲ್ಲಿ ಲಾವಾ ಹೊರಸೂಸಲು ಆರಂಭವಾಗಿದ್ದು, ಸೋಮವಾರ ಸಾವಿರಾರು ನಾಗರಿಕರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಮೇಯನ್‌ನಲ್ಲಿರುವ ಜ್ವಾಲಾಮುಖಿ ಪರ್ವತದಿಂದ ಲಾವಾ ನಿಧಾನವಾಗಿ ಹೊರಹರಿಯುತ್ತಿದೆ ಹಾಗೂ ಹೊರಹೊಮ್ಮುತ್ತಿರುವ ಬೂದಿಯು 1 ಕಿಲೋ ಮೀಟರ್ ಎತ್ತರದವರೆಗೆ ಚಿಮ್ಮುತ್ತಿದೆ ಎಂದು ಫಿಲಿಪ್ಪೀನ್ಸ್‌ನ ಜ್ವಾಲಾಮುಖಿ ಸಂಸ್ಥೆ ಹೇಳಿದೆ.

ಪರ್ವತದ ಸುತ್ತಲೂ 7 ಕಿ.ಮೀ. ವ್ಯಾಪ್ತಿಯಲ್ಲಿರುವ ಅಪಾಯ ವಲಯದಿಂದ ತೆರಳುವಂತೆ 12,000ಕ್ಕೂ ಅಧಿಕ ನಿವಾಸಿಗಳಿಗೆ ಸೂಚಿಸಲಾಗಿದೆ.

‘‘ತಾಂತ್ರಿಕವಾಗಿ ಜ್ವಾಲಾಮುಖಿ ಸ್ಫೋಟಿಸುತ್ತಿದೆ. ಆದರೆ, ಸ್ಫೋಟದ ತೀವ್ರತೆ ಕಡಿಮೆಯಿದೆ. ಇದು ಅಪಾಯಕಾರಿ ಮಟ್ಟದಲ್ಲಿ ಸ್ಫೋಟಿಸುವ ಸಾಧ್ಯತೆಯೂ ಇದೆ’’ ಎಂದು ಫಿಲಿಪ್ಪೀನ್ಸ್ ಜ್ವಾಲಾಮುಖಿ ಮತ್ತು ಭೂಕಂಪ ಸಂಸ್ಥೆಯ ವಿಜ್ಞಾನಿಯೊಬ್ಬರು ಹೇಳುತ್ತಾರೆ.

ಅಪಾಯಕಾರಿ ಜ್ವಾಲಾಮುಖಿ ಸ್ಫೋಟ ಎಂದರೆ ಲಾವಾ ರಸ ಅಥವಾ ಬಿಸಿ ಬಂಡೆಗಳು ಮತ್ತು ಅನಿಲಗಳ ದ್ರಾವಣವು ಗಂಟೆಗೆ 60 ಕಿ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಹೊರಚಿಮ್ಮುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News