ಉಡುಪಿ : ರಕ್ತದಾನ, ಆಯುರ್ವೇದಿಯ ಆರೋಗ್ಯ ತಪಾಸಣಾ ಶಿಬಿರ
ಉಡುಪಿ, ಜ.16: ಪಲಿಮಾರು ಮಠ ಶ್ರೀವಿಶ್ವಸಂಜೀವಿನಿ ಟ್ರಸ್ಟ್, ಶ್ರೀಪೇಜಾ ವರ ಬ್ಲಡ್ ಟೀಮ್ ಮತ್ತು ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸಹಯೋಗ ದೊಂದಿಗೆ ರಕ್ತದಾನ ಶಿಬಿರ, ಆಯುರ್ವೇದಿಯ ಆರೋಗ್ಯ ತಪಾಸಣಾ ಶಿಬಿರ ಮತ್ತು ಔಷದಧ ಸೌಲಭ್ಯವನ್ನು ಮಂಗಳವಾರ ಉಡುಪಿ ಸಂಸ್ಕೃತ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಆಯುರ್ವೇದಿಕ್ ವೈದ್ಯ ಡಾ.ಕೆ.ಕೃಷ್ಣರಾಜ್ ಭಟ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹರಿ ದಾಸ್ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ.ಎಸ್.ಎಂ. ರಾಮಚಂದ್ರ ಹಾಗೂ ಅಬ್ದುಲ್ ರಝಾಕ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಡಾ.ಎನ್.ಆರ್.ಆಚಾರ್ಯ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಭಾಸ್ಕರ ಆಚಾರ್ಯ, ಬ್ಲಡ್ ಟೀಮ್‌ನ ಗೌರವಾಧ್ಯಕ್ಷ ಕೆ.ಉದಯ ಕುಮಾರ್ ಶೆಟ್ಟಿ, ಸಂಚಾಲಕ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಡಾ.ಗುರುರಾಜ್ ತಂತ್ರಿ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಹರಿಕೃಷ್ಣ ರಾವ್ ಎ. ಉಪಸ್ಥಿತರಿದ್ದರು.
ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ.ಷಣ್ಮುಖ ಸ್ವಾಗತಿಸಿದರು. ಸುದರ್ಶನ್ ಭಟ್ ಕಾರ್ಯಕ್ರಮ ನಿರೂಪಿಸಿದರು.