ಮನೆ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸಿಪಿಎಂ ಸ್ವಾಗತ
ಮಂಗಳೂರು, ಜ. 16: ಮಂಗಳೂರು ಮಹಾನಗರ ಪಾಲಿಕೆಯು ಮನೆ ನಿವೇಶನದಾರರಿಗೆ ಮನೆ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ನಿವೇಶವ ರಹಿತರ ಹೋರಾಟ ಸಮಿತಿ ಸಿಪಿಎಂ ಸ್ವಾಗತಿಸಿದೆ.
ಕಳೆದ 5 ವರ್ಷಗಳಂದ ನಿರಂತರ ಹೋರಾಟ ನಡೆಸಿದ ಹೋರಾಟ ಸಮಿತಿಯ ಹೋರಾಟಕ್ಕೆ ಸಂದ ಜಯ ಎಂದು ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
ಮನೆ ನಿವೇಶನ ಹಂಚಿಕೆ ಪ್ರಕ್ರಿಯೆ ಸಂರ್ಪೂಣವಾಗಿ ಪಾರದರ್ಶಕ ಕ್ರಮ ಅನುಸರಿಸಲಾಗಿದ್ದರೂ ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ರೀತಿಯಲ್ಲಿ ಅರ್ಹ ಫಲಾನುಭಗಳಿಗೆ ಅನ್ಯಾಯ ಎವೆಸಗಿದೆ. ಆಯ್ಕೆ ಪಟ್ಟಿಯಲ್ಲಿ ಈಗಾಗಲೇ ಮನೆ, ಸ್ವಂತ ಜುೀನು, ಉದ್ಯೋಗ ಇರುವವರನ್ನು ಆಯ್ಕೆ ಮಾಡಿರುವುದನ್ನು ಕಂಡುಕೊಂಡ ಹೋರಾಟ ಸಮಿತಿಯು ಈ ಬಗ್ಗೆ ಅಧ್ಯಯನ ನಡೆಸಲು ಒಂದು ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಿತ್ತು. ಆ ಪ್ರಕಾರ ಸುಮಾರು 15% ರಷ್ಟು ಅರ್ಹರಲ್ಲದವರನ್ನು ಆಯ್ಕೆ ಮಾಡಿರುವುದನ್ನು ಗುರುತಿಸಲಾಗಿದೆ.
ಸುತಿಯು 24 ತಾಸುಗಳ ಅನ್ನ ಸತ್ಯಾಗ್ರಹ, ಮಹಾನಗರ ಪಾಲಿಕೆಯ ಎದುರು ಅನಿರ್ದಿಷ್ಟಾವಧಿ ಧರಣಿ, ಶಾಸಕರ ಕಛೇರಿ ಚಲೋ, ಸುರತ್ಕಲ್ ಕಚೇರಿ ಚಲೋ ಮೊದಲಾದ ಚಳುವಳಿಗಳನ್ನು ಸಂಘಟಿಸಿ ಸಾವಿರಾರು ಸಂಖ್ಯೆಯಲ್ಲಿ ನಿವೇಶನ ರಹಿತರು ಹೋರಾಟದಲ್ಲಿ ಭಾಗವಹಿಸಿದ್ದರು.