​ಜಾಲಾಡಿ: ರಾಜ್ಯಮಟ್ಟದ ‘ಜಟ್ಟಿಗೇಶ್ವರ ಕ್ರಿಕೆಟ್’ಗೆ ಚಾಲನೆ

Update: 2018-01-16 15:37 GMT

ಕುಂದಾಪುರ, ಜ.16: ಜಾಲಾಡಿಯ ಜೆಸಿಸಿ ಮೈದಾನದಲ್ಲಿ ಜೆಸಿಸಿ ಕ್ರಿಕೆಟ್ ಕ್ಲಬ್ ಜಾಲಾಡಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಜಟ್ಟಿಗೇಶ್ವರ ಕ್ರಿಕೆಟ್ ಪಂದ್ಯಾವಳಿಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು.

ಕುಂದಾಪುರ, ಜ.16: ಜಾಲಾಡಿಯ ಜೆಸಿಸಿ ಮೈದಾನದಲ್ಲಿ ಜೆಸಿಸಿ ಕ್ರಿಕೆಟ್ ಕ್ಲಬ್ ಜಾಲಾಡಿ ಆಯೋಜಿಸಿದ ಎರಡು ದಿನಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಜಟ್ಟಿಗೇಶ್ವರ ಕ್ರಿಕೆಟ್ ಪಂದ್ಯಾವಳಿಗೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗ್ರಾಮೀಣ ಭಾಗದ ಯುವ ಪ್ರತಿಭೆ ಗಳನ್ನು ಪ್ರೋತ್ಸಾಹಿಸಿ, ಅಶಕ್ತರಿಗೆ ನೆರವಾಗುವ ಮೂಲಕ ಕೇವಲ ಮೋಜಿಗಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸದೆ, ಸಾಮಾಜಿಕ ಕಳಕಳಿಗೆ ಒತ್ತು ನೀಡುವಂತೆ ಗೋಪಾಲ ಪೂಜಾರಿ ಹೇಳಿದರು.

ಸಾಧಕ ಕ್ರೀಡಾಳುಗಳಿಗೆ ಸನ್ಮಾನ: ಈ ಸಂದಭರ್ದಲ್ಲಿ ಕುಂದಾಪುರದ ಸಾಧಕ ಕ್ರೀಡಾಪಟುಗಳಾದ ಅಂತಾರಾಷ್ಟ್ರೀಯ ವೆಯ್ಟಾಲಿಪ್ಟರ್ ವಿಶ್ವನಾಥ ಬಾಸ್ಕರ್ ಗಾಣಿಗ ಬಾಳಿಕೆರೆ ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಾಗರ ರೈಸನ್ ಮೂವತ್ತುಮುಡಿ ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಿಜೆಪಿ ಮುಖಂಡ ಬಿ.ಎಂ.ಸುಕುಮಾರ್ ಶೆಟ್ಟಿ, ತಾಪಂ ಸದಸ್ಯ ರಾಜು ದೇವಾಡಿಗ, ಉದ್ಯಮಿ ಕೆ.ಆರ್. ನಾಯ್ಕಿ, ಕಂಡ್ಲೂರು ಎಸ್‌ಐ ಶ್ರೀಧರ್ ನಾಯ್ಕಿ, ಜೆಡಿಎಸ್ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ, ಜೆಡಿಎಸ್ ಅಲ್ಪಸಂಖ್ಯಾಕ ಘಟಕದ ಕಾರ್ಯಧ್ಯಕ್ಷ ಮನ್ಸೂರ್ ಇಬ್ರಾಹಿಂ, ಹೆಮ್ಮಾಡಿ ದೇವಸ್ಥಾನದ ಅರ್ಚಕ ಗಜೇಂದ್ರ ಹೊಳ್ಳ, ರಮೇಶ್ ದೇವಾಡಿಗ, ಕೃಷ್ಣ ಪೂಜಾರಿ ಭಟ್ರಬೆಟ್ಟು ಉಪಸ್ಥಿತರಿದ್ದರು.
ಜೆಸಿಸಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ದೇವಾಡಿಗ ಸ್ವಾಗತಿಸಿದರು. ವಿನಯ ಉ್ಯಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News