ಅಕ್ರಮ ಗಾಂಜಾ ಮಾರಾಟ: ಇಬ್ಬರ ಸೆರೆ
Update: 2018-01-16 21:10 IST
ಉಡುಪಿ, ಜ.16: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಜ.16ರಂದು ಬೆಳಗ್ಗೆ 10.40ರ ಸುಮಾರಿಗೆ ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆಯ ಮಣಿಪಾಲ ಆಚಾರ್ಯ ಕಂಪೌಂಡ್ ಬಳಿ ಬಂಧಿಸಿದ್ದಾರೆ.
ಪರ್ಕಳದ ಮನೀಷ್ ಭಟ್(20) ಹಾಗೂ ಹಿರಿಯಡ್ಕ ಗುಡ್ಡೆಯಂಗಡಿಯ ಹರ್ಷಿತ್(23) ಬಂಧಿತ ಆರೋಪಿಗಳು. ಇವರ ಬ್ಯಾಗ್‌ನಲ್ಲಿದ್ದ 650 ಗ್ರಾಂ ತೂಕದ ಗಾಂಜಾ ಹಾಗೂ 2,700ರೂ. ಮತ್ತು ಸಣ್ಣ ಸಣ್ಣ 9 ಪ್ಲಾಸ್ಟಿಕ್ ತೊಟ್ಟೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.