ಬೈಕ್ ಢಿಕ್ಕಿ: ಪಾದಾಚಾರಿ ಮೃತ್ಯು
Update: 2018-01-16 21:10 IST
ಹೆಬ್ರಿ, ಜ.16: ಕಳ್ತೂರು ಗ್ರಾಮದ ಹೊಯಿಗೆ ಬೆಳ್ಳಾರ್ ಎಂಬಲ್ಲಿ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕೆಂಜೂರು ಗ್ರಾಮದ ಕುಕ್ಕುಂಜೆ ಬೈಲು ನಿವಾಸಿ ಶೀನ ನಾಯ್ಕಾ ಎಂಬವರ ಮಗ ಸಂಜೀವ ನಾಯ್ಕ್(35) ಎಂದು ಗುರುತಿಸಲಾಗಿದೆ. ಅಪ ಘಾತದಲ್ಲಿ ಬೈಕ್ ಸವಾರ ಅಣ್ಣಪ್ಪ ಹಾಗೂ ಹಿಂಬದಿಯಲ್ಲಿದ್ದ ಅವರ ಪತ್ನಿ ಸೀತಾ ಎಂಬವರು ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೀವ ನಾಯ್ಕ ಸಂತೆಕಟ್ಟೆ -ಬ್ರಹ್ಮಾವರ ರಸ್ತೆಯಲ್ಲಿ ಜ.14ರಂದು ರಾತ್ರಿ 8:10 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಬಂದ ಅಣ್ಣಪ್ಪರ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸಂಜೀವ ನಾಯ್ಕ್ ಜ.15ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.