ಓಮ್ನಿ ಕಾರು ಢಿಕ್ಕಿ: ವಿದ್ಯಾರ್ಥಿ ಮೃತ್ಯು
ಕುಂದಾಪುರ, ಜ.16: ಓಮ್ನಿ ಕಾರು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಯೊಬ್ಬರು ಮೃತಪಟ್ಟ ಘಟನೆ ಜ.15ರಂದು ರಾತ್ರಿ ವೇಳೆ ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯ ಬಸ್ರೂರು ಎಂಬಲ್ಲಿ ನಡೆದಿದೆ.
ಮೃತರನ್ನು ಬೆಟ್ಟಾಗರ ನಿವಾಸಿ ಸಂಜೀವ ಪೂಜಾರಿ ಹಾಗೂ ರೇವತಿ ದಂಪತಿ ಪುತ್ರ ನಿತಿನ್ ಪೂಜಾರಿ(19) ಎಂದು ಗುರುತಿಸಲಾಗಿದೆ. ಬಸ್ರೂರು ರಸ್ತೆಯಲ್ಲಿ ಬಸ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಅಪಘಾತದ ಶಬ್ದ ಕೇಳಿ ಮನೆಯಲ್ಲಿ ಮಲಗಿದ್ದ ನಿತಿನ್ ಹಾಗೂ ನೆರಮನೆಯ ಅನಿಲ್ ಎಂಬವರು ಕೂಡಲೇ ನೆರವಿಗೆ ದಾವಿಸಿದರು. ಆಗ ಕುಂದಾಪುರದಿಂದ ಬಸ್ರೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು ನಿತಿನ್ ಹಾಗೂ ಅನಿಲ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ನಿತಿನ್‌ನನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಅನಿಲ್ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿ ಯಾಗಿದ್ದ ನಿತಿನ್ ಗೌರವಾರ್ಥ ಮಂಗಳವಾರ ಬೆಳಗ್ಗೆ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ರಜೆ ಸಾರಲಾಯಿತು. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.