ಬಿಲ್ಡರ್ ಆಗುವ ಹಂಬಲವಿದೆಯೇ?: ಇಲ್ಲಿದೆ ಸುವರ್ಣಾವಕಾಶ
ಮಂಗಳೂರು, ಜ.16: ಬಿಲ್ಡರ್, ಇಂಜಿನಿಯರ್, ಕನ್‍ಸ್ಟ್ರಕ್ಷನ್ ಸೈಟ್ ಸೂಪರ್‍ವೈಸರ್, ಕಂಟ್ರಾಕ್ಟರ್ (ಸಿವಿಲ್) ಆಗಲು ಬಯಸುವವರಿಗೆ, ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮ/ಪದವಿ ಪಡೆದು ಹೆಚ್ಚಿನ ಪ್ರಾಯೋಗಿಕ ಅನುಭವ ಪಡೆಯಲು ಇಚ್ಛಿಸುವವರಿಗೆ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಉಚಿತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಜ.18ರಂದು ಕಂಕನಾಡಿಯ ಕೊಚ್ಚಿನ್ ಬೇಕರಿ ಹತ್ತಿರದ ಟ್ಯಾಲೆಂಟ್ ಸಭಾಭವನದಲ್ಲಿ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಕಾರ್ಯಾಗಾರ ಆರಂಭವಾಗಲಿದ್ದು, ವಿಶ್ವಾಸ್ ಬಾವ ಬಿಲ್ಡರ್ಸ್ ಆಡಳಿತ ನಿರ್ದೇಶಕ ಅಬ್ದುರ್ರವೂಫ್ ಪುತ್ತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ 60 ಮಂದಿ ಹೆಸರು ನೋಂದಾಯಿಸಿದ್ದು, ಇನ್ನು 40 ಮಂದಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶವಿದೆ. ಜ.17ರ ಸಂಜೆ 6 ಗಂಟೆಯೊಳಗಾಗಿ ಕರೆ ಮಾಡಿ ಆಸಕ್ತರು ಹೆಸರನ್ನು ನೋಂದಾಯಿಸಬಹುದಾಗಿದೆ.
ಬೆಳಗ್ಗೆ 9:30ರಿಂದ 9:50ರ ತನಕ ನೋಂದಣಿಗೆ ಅವಕಾಶವಿದೆ. ಹತ್ತು ಗಂಟೆಯ ನಂತರ ಬಂದವರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ), ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2 ಕಚೇರಿಯನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ದೂ.ಸಂ.: 0824-4267883 ಅಥವಾ ಮೊ.ಸಂ,: 9743715388ಗೆ ಕರೆ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ.