×
Ad

ಒಂದು ಲಕ್ಷ ಕೋ.ರೂ. ವ್ಯವಹಾರದ ಮೈಲುಗಲ್ಲು: ಮಹಾಬಲೇಶ್ವರ ರಾವ್

Update: 2018-01-16 23:06 IST

ಮಂಗಳೂರು, ಜ.16: ಕರ್ಣಾಟಕ ಬ್ಯಾಂಕ್‌ನ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ಬ್ಯಾಂಕಿನ ಕಳೆದ ತ್ರೈಮಾಸಿಕದ ಪ್ರಗತಿಯ ಬಗ್ಗೆ ಪರಿಶೀಲನೆ ಬಗ್ಗೆ ಮುಖ್ಯಸ್ಥರ ಸಭೆಯು ಮಂಗಳವಾರ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ 2017ರ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದ ಬಗ್ಗೆ ಮಾತನಾಡಿದ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್. ಬ್ಯಾಂಕ್ ಕಳೆದ ತ್ರೈಮಾಸಿಕದಲ್ಲಿ (ಡಿ.17) ಒಂದು ಲಕ್ಷ ಕೋ.ರೂ. ವ್ಯವಹಾರದ ಮೈಲಿಗಲ್ಲನ್ನು ದಾಟಿ ಹೊಸ ವಿಕ್ರಮ ಮೆರೆದಿದೆ. ಶೇ.76.87 C.D. Ratio (ಮುಂಗಡ ಹಾಗೂ ಠೇವಣಿಗಳ ಅನುಪಾತ) ಮತ್ತು ಶೇ.87.30 ನಿರ್ವಹಣಾ ಲಾವನ್ನು ಸಾಧಿಸುವುದರ ಮೂಲಕ ಹೊಸ ದಾಖಲೆ ನಿರ್ಮಿಸಿದೆ ಎಂದರು.

ಈ ರೀತಿಯ ಅಭಿವೃದ್ಧಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು. ರಿಟೇಲ್ ಹಾಗೂ ಮಿಡ್ ಕಾರ್ಪೊರೇಟ್ ಮುಂಗಡಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಬ್ಯಾಂಕಿನ ಮುಂಗಡವನ್ನು ಸದೃಢಗೊಳಿಸಬೇಕು ಎಂದು ಸಿಬ್ಬಂದಿಗೆ ಕರೆ ನೀಡಿರು.

ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ರಾಘವೇಂದ್ರ ಭಟ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜನರಲ್ ಮ್ಯಾನೇಜರ್ ಚಂದ್ರಶೇಖರ ರಾವ್ ಬಿ. ಕಳೆದ ತ್ರೈಮಾಸಿಕದಲ್ಲಿ ನಿರ್ವಹಿಸಿದ ಬ್ಯಾಂಕಿನ ವ್ಯವಹಾರದ ಕುರಿತು ಅವಲೋಕಿಸಿದರು.

ಜನರಲ್ ಮ್ಯಾನೇಜರ್‌ಗಳಾದ ಸುಭಾಶ್ಚಂದ್ರ ಪುರಾಣಿಕ್, ಬಾಲಚಂದ್ರ ವೈ.ವಿ., ಮುರಲೀಧರ ಕೃಷ್ಣರಾವ್, ನಾಗರಾಜ ರಾವ್ ಬಿ., ಗೋಕುಲ್‌ದಾಸ್ ಪೈ, ಮಂಜುನಾಥ ಭಟ್ ಬಿ.ಕೆ. ಹಾಗೂ ಮಹಾಲಿಂಗೇಶ್ವರ ಕೆ. ಉಪಸ್ಥಿತರಿದ್ದರು.

ದೇಶದಾದ್ಯಂತ ಇರುವ ಬ್ಯಾಂಕಿನ ಹನ್ನೆರಡು ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು, ಮಂಗಳೂರಿನಲ್ಲಿರುವ ಪ್ರಧಾನ ಕಚೇರಿಯಲ್ಲಿನ ಹಲವು ವಿಬಾಗಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದರು.ಬ್ಯಾಂಕಿನ ಡೆಪ್ಯುಟಿ ಜನರಲ್ ಮ್ಯಾನೇಜರ್ ರವೀಂದ್ರನಾಥ ಹಂದೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News