ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವ ಸರ್ಕಾರಿ ಶಾಲೆ : ಅಮೀನ್ ಸೈಫುಲ್ಲಾಹ್

Update: 2018-01-16 17:55 GMT

ಭಟ್ಕಳ,ಜ.16: ಖಾಸಗಿ ಶಾಲೆಗಳ ಭರಾಟೆಗಳ ನಡುವೆ ಮುರುಡೇಶ್ವರದ ಸರಕಾರಿ ಗಂಡುಮಕ್ಕಳ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೈಪೋಟಿ ನೀಡುತ್ತಿದ್ದು ಪ್ರಸಂಶನೀಯವಾಗಿದೆ ಎಂದು ಜಮಾಅತುಲ್ ಮುಸ್ಲಿಮೀನ್ ಮುರುಡೇಶ್ವರದ ಅಧ್ಯಕ್ಷ ಮುಹಮ್ಮದ್ ಅಮೀನ್ ಸೈಫುಲ್ಲಾಹ್ ಹೇಳೀದರು. 

ಅವರು ಮುರುಡೇಶ್ವರದ ಸರ್ಕಾರಿ ಮಾದರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಶಾಲಾ ವಾಷೀಕೋತ್ಸವ ಸಮಾರಂಭಗಳು ಆ ಶಾಲೆಯ ಪ್ರತಿಭೆಗಳನ್ನು ಅನಾವಣಗೊಳಿಸುತ್ತದೆ ಎಂದ ಅವರು, ಶಾಲೆಯು ನಡೆಸಿರುವ ವಿಜ್ಞಾನ ವಸ್ತು ಪ್ರದರ್ಶನ, ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಸಾಧನೆ ಹಿಂದೆ  ಇಲ್ಲಿನ ಶಿಕ್ಷಕರ ಶ್ರಮವಿದೆ ಎಂದರು. 

ಮುಖ್ಯ ಅತಿಥಿ ಭಟ್ಕಳದ ಅಂಜುಮನ್ ಪಿ.ಯು ಕಾಲೇಜು ಉಪನ್ಯಾಸಕ ರವೂಫ ಅಹ್ಮದ್ ಸವಣೂರು ಮಾತನಾಡಿ, ಮುಸ್ಲಿಂ ಎಜ್ಯುಕೇಶನ್ ಸೊಸೈಟಿಯು ತಾವು ಕಲಿತ ಈ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ಹೊಂದಿದ್ದು ಸುಸಜ್ಜಿತ ಕಟ್ಟಡವನ್ನು ಮತ್ತು  ಗೌರವ ಶಿಕ್ಷಕರನ್ನು  ನೀಡಿರುತ್ತಾರೆ. ಈ ಶಾಲೆ ತಾಲೂಕಿನಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಉರ್ದು ಶಾಲೆಯಾಗಿದೆ ಎಂದರು. 

ವೇದಿಕೆಯಲ್ಲಿ ಮನ್ನಾ ಜುಬೇರ, ಶೇಖ್ ಶಬ್ಬರ್, ಜಹೂರ ಹಾಜಿ ಅಮೀನ್, ಮೌಲಾನಾ ಅಬ್ದುಲ್ ಸಮದ್, ಶೇಖ್ ಇಲ್ಯಾಸ್, ಮುಹಮ್ಮದ್ ಅಲಿಬಾಷಾ, ಇಲ್ಯಾಸ ಕಾಲೂ, ಜಬ್ಬಾರ್ ಹಾಜಿ ಬುಡನ್ ಹಾಜರಿದ್ದರು. ಆಟೋಟ ಸ್ಫರ್ಧೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಮೂದ್ ಗಂಗಾವಳಿ ಕಾರ್ಯಕ್ರಮ ನಿರ್ವಹಿಸಿದರು.

ಶಾಲಾ ಮುಖ್ಯ ಶಿಕ್ಷಕ ನಿಸಾರ್ ಅಹ್ಮದ್ ವರದಿ ವಾಚಿಸಿದರು, ಮೌಲಾನಾ ಸಾಅದಾನ್ ವಂದನಾರ್ಪಣೆಗೈದರು, ಶಾಲಾ ಶಿಕ್ಷಕರಾದ ಶ್ರೀಮತಿ ಅಂಜನಿ ನಾಯ್ಕ, ಪ್ರಕಾಶ ಭಟ್ಟ, ಬುರ್ಹಾನ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News