×
Ad

ಬೆಂಗರೆ ಜಮೀನು ವಿವಾದ: ಮುಸ್ಲಿಂ ಲೀಗ್ ಮನವಿ

Update: 2018-01-17 19:55 IST

ಮಂಗಳೂರು, ಜ.17: ಬೆಂಗರೆಯ ಸರ್ವೆ ನಂಬ್ರ 15/16ರ ಜಮೀನು ವಿವಾದವನ್ನು ಬಗೆಹರಿಸುವಂತೆ ದ.ಕ.ಜಿಲ್ಲಾ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಿಯೋಗ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಮಂಗಳೂರು ತಹಶೀಲ್ದಾರರು ಈ ಜಮೀನನ್ನು ಅಂಗನವಾಡಿಗೆ ನೀಡಿದ್ದರೆ, ರೇವು ಅಧಿಕಾರಿಗಳು ಎಆರ್‌ಕೆ ಸಂಸ್ಥೆಗೆ ನೀಡಿದ್ದಾರೆ. ಇದರಿಂದ ಸ್ಥಳೀಯರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇಲಾಖಾಧಿಕಾರಿಗಳ ಎಡವಟ್ಟಿನಿಂದ ಊರವರು ಪರಸ್ಪರ ಹೊಡೆದಾಡುವ ಪ್ರಮೇಯ ಎದುರಾಗಿದೆ. ಹಾಗಾಗಿ ಇದಕ್ಕೆ ಪರಿಹಾರ ಕಲ್ಪಿಸುವಂತೆ ಲೀಗ್ ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಮುಸ್ಲಿಂ ಲೀಗ್ ಬೆಂಗರೆ ವಲಯ ಅಧ್ಯಕ್ಷ ಎಂ.ಕೆ.ಅಶ್ರಫ್, ರಾಜ್ಯ ಮುಖಂಡ ಇಸ್ಮಾಯೀಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News