ಉಡುಪಿ: ಕ್ಯಾನ್ ಬಜಾರ್ ಉತ್ಸವ ಉದ್ಘಾಟನೆ
ಉಡುಪಿ, ಜ.17: ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಸಾಲ ನೀಡುವುದರ ಮೂಲಕ ಮಹಿಳೆಯರಲ್ಲಿ ಆರ್ಥಿಕ ಸದೃಢತೆ ಮತ್ತು ಆತ್ಮವಿಶ್ವಾಸ ಬೆಳೆಸುವಲ್ಲಿ ಸಹಾಯ ಮಾಡುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದ್ದಾರೆ.
ಬುಧವಾರ ಕೆನರಾ ಬ್ಯಾಂಕ್ ಆವರಣದಲ್ಲಿ ನಡೆದ ಕ್ಯಾನ್ ಬಜಾರ್ ಉತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಹಿಳೆಯರು ಸ್ವತಃ ಆಸಕ್ತಿ ವಹಿಸಿ, ಸಮಾಜದಲ್ಲಿ ಮುಂದೆ ಬರಬೇಕು. ಅವಕಾಶಗಳನ್ನು ಸದುಪಯೋಗಿಸಿಕೊಂಡು ಕ್ರಿಯಾಶೀಲತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವಾವಲಂಬಿ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಕಡಿಮೆ ಬೆಲೆಯಲ್ಲಿ ಲೋನ್ ನೀಡುತ್ತಿದ್ದು, ಮಹಿಳಾ ಸಬಲೀಕರಣಕ್ಕೂ ಪ್ರೋತ್ಸಾಹ ನೀಡುತ್ತಿದೆ ಎಂದು ಕೆನರಾ ಬ್ಯಾಂಕ್‌ನ ಉಪುಹಾಪ್ರಬಂಧಕಿ ವಿಜಯಲಕ್ಷ್ಮೀ ತಿಳಿಸಿದರು.
ಮಹಿಳೆಯರು ಮಾಡಿದ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ದೇಶದಾದ್ಯಂತ ಕೆನರಾ ಬ್ಯಾಂಕ್ ಸತತವಾಗಿ ಉತ್ತೇಜನ ನೀಡುತ್ತಿದ್ದು, ಆರ್ಥಿಕವಾಗಿ ಮಹಿಳೆಯರು ಮುನ್ನೆಡೆ ಸಾಧಿಸುವಂತರಾಗಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭ ನಿಟ್ಟೂರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್ ವತಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿ ರೇಣು ಜಯರಾಮ್ ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್‌ನ ಡಿವಿಜನಲ್ ಮ್ಯಾನೇಜರ್ ಸದಾನಂದ ಕಾಮತ್ ಸ್ವಾಗತಿಸಿದರು, ನಿಕಿತಾ ನಿರೂಪಿಸಿದರು.