ಮಂಗಳೂರು: ಕಸಾಪ ಆಮಂತ್ರಣ ಪತ್ರಿಕೆ ಬಿಡುಗಡೆ
Update: 2018-01-17 20:19 IST
ಮಂಗಳೂರು, ಜ.17: ಸುರತ್ಕಲ್‌ನ ಗೋವಿಂದದಾಸ ಕಾಲೇಜಿನಲ್ಲಿ ಜ.23ರಂದು ಪ್ರೊ. ಎಚ್. ರಮೇಶ ಕೆದಿಲಾಯರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರಗಲಿ ರುವ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಮಂತ್ರಣ ಪತ್ರಿಕೆಯನ್ನು ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಬಿಡುಗಡೆಗೊಳಿಸಿದರು.
ಈ ಸಂದರ್ಭ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಮಂಗಳೂರು ತಾಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ಬಿ. ಶೆಟ್ಟಿ, ಪದಾಧಿ ಕಾರಿಗಳಾದ ಪ್ರೊ.ಪಿ. ಕೃಷ್ಣ ಮೂರ್ತಿ, ಅರುಣಾ ಕುಮಾರಿ ನಾಗರಾಜ, ಜಯಲಕ್ಷ್ಮೀ ಭಟ್ ಉಳುವಾನ, ದಯಾಮಣಿ ಕೋಟ್ಯಾನ್, ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.