ಕರ್ಮ ಅಭ್ಯಾಸ’ ವೈದ್ಯಕೀಯ ತರಬೇತಿ ಶಿಬಿರ
Update: 2018-01-17 20:22 IST
ಉಡುಪಿ, ಜ.17: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವಜ್ರ ಮಹೋತ್ಸವದ ಅಂಗವಾಗಿ ‘ಕರ್ಮ ಅಭ್ಯಾಸ’ ವೈದ್ಯಕೀಯ ತರಬೇತಿ ಶಿಬಿರವನ್ನು ಇತ್ತೀಚೆಗೆ ಆಸ್ಪತ್ರೆಯಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಉದ್ಘಾಟಿಸಿದರು. ಕಾಲೇಜಿನ ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಜಿ.ಶ್ರೀನಿವಾಸ ಆಚಾರ್ಯ, ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ಉಪಸ್ಥಿತರಿದ್ದರು.
ಕಾಯಚಿಕಿತ್ಸಾ, ಪಂಚಕರ್ಮ, ಶಾಲಾಕ್ಯತಂತ್ರ, ಶಲ್ಯತಂತ್ರ, ಪ್ರಸೂತಿತಂತ್ರ ಮತ್ತು ಸ್ತ್ರೀರೋಗ, ರಸಶಾಸ್ತ್ರ ಮತ್ತು ಭೈಷ್ಯಜ್ಯ ಕಲ್ಪನಾ ವಿಭಾಗದವರಿಂದ ಸಂವಾದಾತ್ಮಕ ಅಧಿವೇಶನ ಮತ್ತು ಕಾರ್ಯಾಗಾರ ನಡೆಸಲಾಯಿತು. ದೇಶದ ನಾನಾ ಭಾಗಗಳಿಂದ ಆಗಮಿಸಿದಂತಹ ಆಯುರ್ವೇದ ವೆದ್ಯರು ಇದರಲ್ಲಿ ಭಾಗವಹಿಸಿದ್ದರು.