ಬಿಸಿಸಿ ಸದಸ್ಯರಿಂದ ಮಂಗಳೂರು ಕಮಿಷನರ್ ಭೇಟಿ
Update: 2018-01-17 20:49 IST
ಮಂಗಳೂರು, ಜ. 17: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಸದಸ್ಯರು ಮಂಗಳೂರು ಪೊಲೀಸ್ ಕಮಿಷನರ್ ಟಿ. ಆರ್ ಸುರೇಶ್ ರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಪ್ರಸಕ್ತ ವಿಷಯಗಳ ಬಗ್ಗೆ ಚರ್ಚಿಸಿದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಚಟುವಟಿಕೆ ಬಗ್ಗೆ ಕಮಿಷನರ್ ರಿಗೆ ವಿವರಿಸಿ, ಸದ್ಯದಲ್ಲೇ ನಡೆಯುವ ಸಂವಾದ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಯಿತು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ ಹಾಜಿ ಎಸ್ ಎಮ್ ರಶೀದ್, ಉಪಾಧ್ಯಕ್ಷರುಗಳಾದ ಹಾಜಿ ಝಕರಿಯಾ ಜೋಕಟ್ಟೆ, ಅಬ್ದುಲ್ ರವೂಫ್ ಪುತ್ತಿಗೆ, ನಿಸಾರ್ ಮುಹಮ್ಮದ್, ಮನ್ಸೂರ್ ಅಹ್ಮದ್, ಮುಹಮ್ಮದ್ ಹಾರಿಸ್, ಶೌಖತ್ ಸೂರಿ, ಮಮ್ತಾಝ್ ಅಲಿ, ನಾಸಿರ್ ಲಕ್ಕಿಸ್ಟಾರ್, ಆಸಿಫ್ ಸೂಫಿ ಖಾನ್ ಮತ್ತು ಬಿಸಿಸಿಐ ಆಡಳಿತಾಧಿಕಾರಿ ಹಾಜಿ ಖಾಲಿದ್ ತಣ್ಣೀರು ಬಾವಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.