ಗಾಂಜಾ ದಾಸ್ತಾನು: ವಿದೇಶಿ ವಿದ್ಯಾರ್ಥಿ ಸಹಿತ ಇಬ್ಬರ ಸೆರೆ
Update: 2018-01-17 22:24 IST
ಮಣಿಪಾಲ, ಜ.17: ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ವಿದೇಶಿ ವಿದ್ಯಾರ್ಥಿ ಸಹಿತ ಇಬ್ಬರನ್ನು ಮಣಿಪಾಲ ಪೊಲೀಸರು ಜ.16ರಂದು ಮಣಿಪಾಲ ವಿದ್ಯಾರತ್ನ ನಗರ ಎಂಬಲ್ಲಿ ಬಂಧಿಸಿದ್ದಾರೆ
ಮಣಿಪಾಲದ ವಿದ್ಯಾರ್ಥಿಗಳಾದ ಚಕ್ರಾಧರ ಚೌಧರಿ(26) ಹಾಗೂ ಯೆಮನ್ ದೇಶದ ಮೊಯಾದ್ ಅಬ್ದುಲ್ಲಾ ಬಿನ್ ತಾಲೇಬ್(24) ಬಂಧಿತ ಆರೋಪಿಗಳು. ಖಚಿತ ಮಾಹಿತಿಯಂತೆ ವಿದ್ಯಾರತ್ನ ನಗರದ ಶಾಂಭವಿ ಬಿಲ್ಡಿಂಗ್‌ನಲ್ಲಿರುವ ಇವರ ರೂಮಿಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಬೆಡ್‌ರೂಮಿನಲ್ಲಿ ಮಾರಾಟಕ್ಕಾಗಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ 662 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 16,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.