​ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾ: ವಾರ್ಷಿಕ ಮಹಾ ಸಮ್ಮೇಳನಕ್ಕೆ ಚಾಲನೆ

Update: 2018-01-17 17:10 GMT

ಮಲಪ್ಪುರಂ, ಜ. 16: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದ 55ನೆ ವಾರ್ಷಿಕ ಮತ್ತು 53ನೆ ಸನದುದಾನ ಮಹಾ ಸಮ್ಮೇಳನವು ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಚಾಲನೆಗೊಂಡಿತು.

ಸಂಸ್ಥೆಯ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಹೈದರಾಲಿ ಶಿಹಾಬ್ ತಂಙಳ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಾಣಕ್ಕಾಡ್ ಸಯ್ಯಿದ್ ಸ್ವಾದಿಕ್ ಅಲಿ ಶಿಹಾಬ್ ತಂಙಳರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ದೆಹಲಿ ಪಾರ್ಲಿಮೆಂಟ್ ಬಳಿಯ ಮಸೀದಿಯ ಇಮಾಂ ಮೌಲಾನಾ ಮುಹಿಬುಲ್ಲಾ ಮುಹಮ್ಮದಲಿ ನದ್ವಿ ಉದ್ಘಾಟಿಸಿದರು.

ಶೈಖುಲ್ ಜಾಮಿಅ ಆಲಿಕುಟ್ಟಿ ಮುಸ್ಲಿಯಾರ್ , ಸಂಸದ ಎಂ.ಎ. ಶಾನವಾಝ್, ಶಾಸಕ ಮಞ್ಞಲಾಕುಳಂ ಅಲಿ, ಅಡ್ವೊಕೇಟ್ ಎನ್.ಸೂಫಿ, ಎಂ.ಎಂ. ಮುಹಿಯುದ್ದೀನ್ ಮುಸ್ಲಿಯಾರ್, ಹಕೀಂ ಫೈಝಿ ಆದೃಶ್ಶೇರಿ, ಅಡ್ವೊಕೇಟ್ ಯು.ಎ. ಲತೀಫ್ , ಚೆಮ್ಮುಕ್ಕನ್ ಕುಞ್ಞಿಪು ಹಾಜಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಶೈಖುನಾ ಕುಞ್ಞಿನಿ ಮುಸ್ಲಿಯಾರ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಯ್ಯಿದ್ ಹಾದಿಕ್ ಜಮಲುಲ್ಲೈಲಿ ತಂಙಳ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News