ಮಂಗಳೂರು: ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಸಭೆ
ಮಂಗಳೂರು, ಜ. 16: ಜಿಲ್ಲಾ ಕಾಂಗ್ರೆಸ್ ಉಪಧ್ಯಕ್ಷ ಪ್ರಭಾಕರ್ ಶ್ರೀಯಾನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಸಭೆಯು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಸಂಜೆ ನಡೆಯಿತು.
ಜಿಲ್ಲಾ ವ್ಯಾಪ್ತಿಗೆ ಬರುವ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಂಗಳೂರು ದಕ್ಷಿಣ ಕಾಂಗ್ರೆಸ್ ಸಮಿತಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿಗಳನ್ನು ರಚಿಸಿ ಪಕ್ಷ ಸಂಘಟನೆಗೆ ನಿರ್ಣಯಿಸಲಾಯಿತು. ಮೀನುಗಾರರಿಗೆ ಸರಕಾರದಿಂದ ಬರುವ ಸವಲತ್ತುಗಳನ್ನು ಮೀನುಗಾರರಿಗೆ ತಲುಪಿಸಲು ಮೀನುಗಾರರ ಘಟಕವು ಶೃಮ ವಹಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯಪಟ್ಟರು.
ರಾಜ್ಯ ಮೀನುಗಾರರ ಘಟಕದ ಉಪಧ್ಯಕ್ಷ ಬಶೀರ್ ಬೈಕಂಪಾಡಿ, ಶೇಖರ ಸುವರ್ಣ ಬೆಂಗೆರೆ, ಜಿಲ್ಲಾಧ್ಯಕ್ಷ ದೀಪಕ್ ಬೋಳೊರು, ಬ್ಲಾಕ್ ಅಧ್ಯಕ್ಷ ಜೆ. ಅಬ್ದುಲ್ ಸಲೀಂ, ವಿಶ್ವಾಸ್ ಕುಮಾರ್‌ದಾಸ್, ಕವಿತಾ ವಾಸು, ಸರಳಾ ಕೆ., ಕಮಲಾಕ್ಷ ಸಾಲ್ಯಾನ್, ನಾರಾಯಣ್ ಕೋಟ್ಯಾನ್, ಧನಪಾಲ್, ಭುವನ್, ಸುಸಾಂತ್ ಕರ್ಕೇರ, ಸುನಾಲ್ ಮೆಂಡನ್, ಪವಿತಾ ಡಿ. ಕರ್ಕೇರ, ನವೀನ ಕರ್ಕೇರ ಬೆಂಗ್ರೆ, ಹರೀಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದರು.