ಜ.19 ರಿಂದ ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವ

Update: 2018-01-18 12:19 GMT

ಮಂಗಳೂರು, ಜ. 18: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಪ್ರತಿಭೋತ್ಸವವು ಕಳೆದ ಎರಡು ತಿಂಗಳಿಂದೀಚೆಗೆ ಶಾಖೆ, ಸೆಕ್ಟರ್, ಡಿವಿಜನ್ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆದಿದ್ದು, ರಾಜ್ಯ ಮಟ್ಟದ ಪ್ರತಿಭೋತ್ಸವ 2018 ಜನವರಿ 19,20,21 ರಂದು ಕೊಡಗು ಜಿಲ್ಲೆಯ ಕೊಟ್ಟಮುಡಿಯಲ್ಲಿರುವ ಮರ್ಕಝುಲ್ ಹಿದಾಯ ಕ್ಯಾಂಪಸ್ಸಿನಲ್ಲಿ ನಡೆಯಲಿದೆ .

ಜ.19 ರಂದು ಮಧ್ಯಾಹ್ನ 2 ಗಂಟೆಗೆ ಕೊಡಗು ಜಿಲ್ಲಾ ಉಪ ಖಾಝಿ ಮಹ್ಮೂದ್ ಮುಸ್ಲಿಯಾರ್ ಎಡಪ್ಪಾಲ ಧ್ವಜಾರೋಹಣ ನಡೆಸಲಿದ್ದಾರೆ. ಸಂಜೆ 6:30 ಕ್ಕೆ ಉದ್ಘಾಟನಾ ಸಮಾವೇಶವು ಪ್ರತಿಭೋತ್ಸವ ಸಮಿತಿ ಚಯರ್ ಮ್ಯಾನ್ ಸೈಯದ್ ಹಾಮಿಮ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕರ್ನಾಟಕ ರಾಜ್ಯ  ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ  ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ ನಂತರ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದ್ದು ಸುನ್ನಿ ಮ್ಯಾನೇಜ್ಮೆಂಟ್ ಸಮಿತಿಯ ರಾಜ್ಯಾಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್ ಉಜಿರೆ, ಶಿಹಾಬುದ್ದೀನ್ ತಂಙಳ್ ಕಿಲ್ಲೂರು, ಇಲ್ಯಾಸ್ ತಂಙಳ್ ಎಮ್ಮೆಮಾಡು, ಉಮ್ಮರ್ ಸಖಾಫಿ ತಂಙಳ ಮನ್ಶರ್, ಖಾತಿಂ ಸಖಾಫಿ ತಂಙಳ್ ಮೊದಲಾದವರು ಭಾಗವಹಿಸಲಿದ್ದಾರೆ .

ರಾಜ್ಯದ 18 ಜಿಲ್ಲೆಗಳಿಂದ 96 ಸ್ಪರ್ಧೆಗಳಲ್ಲಿ 3,000 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು ,ಜೂನಿಯರ್ ಸೀನಿಯರ್, ಜನರಲ್ ದ ಅವಾ ಜೂನಿಯರ್ ದ ಅವಾ ಸೀನಿಯರ್, ಕ್ಯಾಂಪಸ್ ಜೂನಿಯರ್ ,ಕ್ಯಾಂಪಸ್ ಸೀನಿಯರ್ ಮುಂತಾದ 7 ವಿಭಾಗಗಳಲ್ಲಿ 10 ವೇದಿಕೆಗಳಲ್ಲಿ ಪ್ರತಿಭೋತ್ಸವ ನಡೆಯಲಿದೆ .

ರವಿವಾರ ಅಪರಾಹ್ನ 2 ಗಂಟೆಗೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಎಸ್.ಇ.ಡಿ.ಸಿ ರಾಜ್ಯಾಧ್ಯಕ್ಷ ಕೆ .ಕೆ .ಎಂ ಸಖಾಫಿ, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಅಧ್ಯಕ್ಷ ಎಸ್ .ಪಿ .ಹಂಝ ಸಖಾಫಿ ಬಂಟ್ವಾಳ, ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ , ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಆತೂರು ಸ ಅದ್ ಮುಸ್ಲಿಯಾರ್, ಎನ್ .ಕೆ.ಎಂ ಶಾಫಿ ಸಅದಿ, ಇಶಾರ ಸಂಪಾದಕ ಅಬ್ದುಲ್ ಹಮೀದ್ ಬಜಪೆ, ಎಂ.ಬಿ.ಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು ಮುಂತಾದ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ರಾಜ್ಯ ಪ್ರತಿಭೋತ್ಸವ ಸಮಿತಿ ವೈಸ್ ಚಯರ್ ಮ್ಯಾನ್ ಹಾಫಿಲ್ ಯಾಕೂಬ್ ಸ ಅದಿ ನಾವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ದ.ಕ. ಜಿಲ್ಲಾಧ್ಯಕ್ಷ ಕೆ.ಪಿ.ಸಿರಾಜುದ್ದೀನ್ ಸಖಾಫಿ ಕನ್ಯಾನ, ಉಡುಪಿ ಜಿಲ್ಯಾಧ್ಯಕ್ಷ ಅಶ್ರಫ್ ರಝಾ ಅಂಜದಿ, ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News