ಬಂಟ್ವಾಳ: ಎನ್‌ಪಿಎಸ್ ರದ್ದುಗೊಳಿಸುವಂತೆ ಒತ್ತಾಯಿಸಿ ಧರಣಿ

Update: 2018-01-18 13:06 GMT

ಬಂಟ್ವಾಳ, ಜ. 18: ಅವೈಜ್ಞಾನಿಕ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್)ಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಜ. 20ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನಲ್ಲಿ "ಫ್ರೀಡಂ ಪಾರ್ಕ್ ಚಲೋ" ಒಂದು ದಿನದ ಉಪವಾಸ ಧರಣಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಗುರುವಾರ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗದಲ್ಲಿ ಧರಣಿ ನಡೆಯಿತು. ಬಳಿಕ ತಹಶೀಲ್ದಾರ್ ಪುರಂದರ ಹೆಗ್ಡೆ ಮೂಲಕ ಮನವಿ ಸಲ್ಲಿಸಲಾಯಿತು.

ನೌಕರರ ಸಂಘದ ತಾಲೂಕು ಘಟಕ ಅಧ್ಯಕ್ಷ ಉಮಾನಾಥ ರೈ ಮೇರಾವು ಮಾತನಾಡಿ, ಎನ್‌ಸಿಪಿ ಸರಕಾರಿ ನೌಕರರ ವೇತನದಲ್ಲಿ ಶೇ.10ರಷ್ಟು ಕಡಿತಗೊಳಿಸಿ ಖಾಸಗಿ ಶೇರು ಮಾರುಕಟ್ಟೆಯಲ್ಲಿ ಹೂಡಲಾಗುತ್ತಿದೆ. ಇದರಿಂದಾಗಿ ನೌಕರರಲ್ಲಿ ಅಭದ್ರತೆ ಹಾಗೂ ಅನಿಶ್ಚಿತತೆ ಉಂಟಾಗಿದೆ. ಇದರಿಂದ ರಾಜ್ಯದಲ್ಲಿ 1.80 ಲಕ್ಷ ಸರಕಾರಿ ನೌಕರರು ಸೇವಾ ನಿವೃತ್ತಿಯ ಸಂದರ್ಭ ಪಿಂಚಣಿ ಮತ್ತು ಇತರ ಸವಲತ್ತುಗಳಿಂದ ವಂಚಿತರಾಗಿ ಸಾಮಾನ್ಯ ಅನ್ಯಾಯಕ್ಕೆ ತುತ್ತಾಗಲಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ತುಂಬೆ, ಗೌರವ ಸಲಹೆ ಗಾರರಾದ ಕೆ.ರಮೇಶ್ ನಾಯಕ್ ರಾಯಿ, ಶಿವಪ್ರಸಾದ್ ಶೆಟ್ಟಿ, ಜಯರಾಮ, ಜೋಯೆಲ್ ಲೋಬೊ, ಕಾರ್ಯದರ್ಶಿ ಗುರುಮೂರ್ತಿ, ತಾಲೂಕು ಸಂಚಾಲಕ ಅವಿನಾಶ, ಉಪಾಧ್ಯಕ್ಷ ಯಮುನಪ್ಪ, ನೀತಾ ಗಟ್ಟಿ, ಕೋಶಾಧಿಕಾರಿ ಶಿವರಾಮ, ಬಸಯ್ಯ ಆಲಮಟ್ಟಿ, ಬಸವರಾಜ್, ಸರಕಾರಿ ನೌಕರರ ಸಂಘದ ತಾಲೂಕು ಖಜಾಂಚಿ ಜೆ. ಜನಾರ್ದನ, ಉಪಾಧ್ಯಕ್ಷರಾದ ಸುನಂದಾ ಕೆ.ಪಿ, ಹರಿಪ್ರಸಾದ್ ಶೆಟ್ಟಿ, ನವೀನ್ ಬಿ, ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News