×
Ad

ಬಂಟ್ವಾಳ: ಮನೆ, ವರ್ಕ್ಸ್ ಶಾಪ್ ಗೆ ಬೆಂಕಿ; ಅಪಾರ ಹಾನಿ

Update: 2018-01-18 19:59 IST

ಬಂಟ್ವಾಳ, ಜ. 18: ಮನೆ ಹಾಗೂ ವರ್ಕ್ಸ್ ಶಾಪ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದ ಘಟನೆ ವೀರಕಂಬ ಗ್ರಾಮದ ಮಂಗಳಪದವು ಎಂಬಲ್ಲಿ ಗುರುವಾರ ನಡೆದಿದೆ.

ವೀರಕಂಬ ಗ್ರಾಮದ ಮಂಗಳಪದವು ಎಂಬಲ್ಲಿರುವ ಕೈಂತಿಲ ಮಹಾಬಲ ಆಚಾರ್ಯ ಅವರಿಗೆ ಸೇರಿದ ಕಟ್ಟಡದಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಈ ಮನೆಯಲ್ಲಿ ಪದ್ಮನಾಭ ಭಂಡಾರಿ ಎಂಬವರು ವಾಸವಾಗಿದ್ದು, ಪುರಂದರ ಅಂಚನ್ ಎಂಬವರ ವೆಲ್ಡಿಂಗ್ ವರ್ಕ್ಸ್ ಶಾಪ್ ಕಾರ್ಯಾಚರಿಸುತ್ತಿದೆ.

ಬೆಂಕಿಯ ಕೆನ್ನಾಲಿಗೆ ಬಾಡಿಗೆಯ ಹೆಂಚು, ಪಕ್ಕಾಸು, ಟಿ.ವಿ, ವೈಯರಿಂಗ್ ಮೊದಲಾದ ಉಪಕರಣಗಳು ಸುಟ್ಟು ಭಸ್ಮವಾಗಿದೆ. ಅದಲ್ಲದೇ ಪುರಂದರ ಅಂಚನ್ ಅವರ ವರ್ಕ್ಸ್ ಶಾಫ್‌ನಲ್ಲಿರುವ ವಿವಿಧ ಉಪಕರಣಗಳು ಕೂಡಾ ಸುಟ್ಟುಕರಕಲಾಗಿದೆ.

ಈ ಘಟನೆ ನಡೆಯವ ವೇಳೆ ಮನೆ ಹಾಗೂ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ವರ್ಕ್ಸ್ ಶಾಪ್ ಕೆಲಸದವರು ಅಂಗಡಿ ಬಂದಾಗ ಈ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News