ಈ ದೇಶದ ಪ್ರಜೆಗಳಿಗೆ ಇನ್ನು ಮುಂದೆ ಅಮೆರಿಕದ ವೀಸಾವಿಲ್ಲ
Update: 2018-01-18 20:25 IST
ವಾಶಿಂಗ್ಟನ್, ಜ. 18: ಕಡಿಮೆ ಕೌಶಲ್ಯದ ಕೆಲಸಗಾರರಿಗೆ ನೀಡುವ ಅಮೆರಿಕ ವೀಸಾಗಳನ್ನು ಇನ್ನು ಮುಂದೆ ಹೈಟಿ ದೇಶದ ಪ್ರಜೆಗಳಿಗೆ ಕೊಡಲಾಗುವುದಿಲ್ಲ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಬುಧವಾರ ಹೇಳಿದೆ.
ಹೈಟಿ ಹಾಗೂ ಇತರ ‘ಶಿಟ್‌ಹೋಲ್’ ಆಫ್ರಿಕನ್ ದೇಶಗಳಿಂದ ಜನರನ್ನು ಯಾಕೆ ಅಮೆರಿಕಕ್ಕೆ ತರಬೇಕು ಎಂಬ ವಿವಾದಾತ್ಮಕ ಹೇಳಿಕೆಯನ್ನು ಶ್ವೇತಭವನದ ಓವಲ್ ಕಚೇರಿಯಲ್ಲಿ ನೀಡಿದ ವಾರದ ಬಳಿಕ ಈ ಬೆಳವಣಿಗೆ ನಡೆದಿದೆ.
ಎಚ್-2ಎ ಮತ್ತು ಎಚ್-2ಬಿ ವೀಸಾಗಳನ್ನು ನೀಡಬಹುದಾದ 80ಕ್ಕೂ ಅಧಿಕ ದೇಶಗಳ ಪಟ್ಟಿಯಿಂದ ಹೈಟಿಯನ್ನು ತೆಗೆದುಹಾಕುತ್ತಿರುವುದಾಗಿ ಆಂತರಿಕ ಭದ್ರತಾ ಇಲಾಖೆಯ ದಾಖಲೆಯೊಂದು ತಿಳಿಸಿದೆ.