ಇಸ್ರೇಲ್ ಸೈನಿಕರೊಂದಿಗೆ ಸಂಘರ್ಷ: ಫೆಲೆಸ್ತೀನ್ ನಾಗರಿಕ ಬಲಿ

Update: 2018-01-18 14:59 GMT
ಸಾಂದರ್ಭಿಕ ಚಿತ್ರ

ರಮಲ್ಲಾ (ಫೆಲೆಸ್ತೀನ್), ಜ. 18: ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಬುಧವಾರ ರಾತ್ರಿ ಇಸ್ರೇಲ್ ಪಡೆಗಳೊಂದಿಗೆ ನಡೆಸಿದ ಸಂಘರ್ಷದಲ್ಲಿ ಫೆಲೆಸ್ತೀನೀಯರೊಬ್ಬರು ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಬುಧವಾರ ರಾತ್ರಿ ಇಸ್ರೇಲ್ ಸೈನಿಕರು ಫೆಲೆಸ್ತೀನ್ ನಗರ ಜೆನಿನ್ ಪ್ರವೇಶಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಿಂಸಾತ್ಮಕ ಸಂಘರ್ಷ ನಡೆದಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಪೊಲೀಸರು ಹೇಳಿದ್ದಾರೆ.

ಮೃತಪಟ್ಟ ವ್ಯಕ್ತಿ 22 ವರ್ಷದ ಅಹ್ಮದ್ ಜರಾರ್ ಎಂಬುದಾಗಿ ಆರೋಗ್ಯ ಸಚಿವಾಲಯ ಗುರುತಿಸಿದೆ.

ಇಬ್ಬರು ಫೆಲೆಸ್ತೀನೀಯರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News