ಸರ್ವಶಕ್ತನು ನೀಡಿದ ಅನುಗ್ರಹಗಳು ಅಪರಿಮಿತ: ಅಬ್ದುಲ್ ರವೂಫ್ ಪುತ್ತಿಗೆ
ಮಂಗಳೂರು, ಜ. 18: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಉತ್ತಮ ಬಿಲ್ಡರ್, ಕಂಟ್ರಾಕ್ಟರ್, ಇಂಜಿನಿಯರ್ ಮತ್ತು ಸೈಟ್ ಸೂಪರ್ ವೈಸರ್ ಆಗಲು ಬಯಸುವವರಿಗೆ ಕಟ್ಟಡ ನಿರ್ಮಾಣದ ಬಗ್ಗೆ ಉಚಿತ ತರಬೇತಿ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರಿನ ಖ್ಯಾತ ಬಿಲ್ಡರ್, ವಿಶ್ವಾಸ್ ಬಾವಾ ಬಿಲ್ಡರ್ಸ್‌ನ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ, ತಾನು ನಡೆದು ಬಂದ ಹಾದಿಯನ್ನು ನೆನಪಿಸುತ್ತಾ ಸರ್ವಶಕ್ತನು ನಮಗೆ ನೀಡಿದ ಅನುಗ್ರಹಗಳು ಅಪರಿಮಿತ. ನಮ್ಮ ಪ್ರತಿಯೊಂದು ಯಶಸ್ಸು ದೇವನಿಗೆ ಸಲ್ಲಬೇಕು. ಅದಕ್ಕಾಗಿ ಪ್ರತಿಕ್ಷಣ ಅವನಿಗೆ ಸ್ತುತಿಗಳನ್ನು ಅರ್ಪಿಸಬೇಕು. ಬದುಕಿನಲ್ಲಿ ಸೋಲು ಬಂದಾಗ ಎದೆಗುಂದಬಾರದು. ಅದು ಮುಂದೆ ಗೆಲುವಿನ ಮುನ್ಸೂಚನೆ ಎಂದು ತಿಳಿಸಿದರು.
ರಫೀಕ್ ಮಾಸ್ಟರ್ ಅವರು 'ಹುಖೂಖುಲ್ ಇಬಾದ್-ಮನುಕುಲದ ಸೇವೆಯ ಅಗತ್ಯತೆ’ ಎಂಬ ವಿಷಯದಲ್ಲಿ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ, ಅಧ್ಯಕ್ಷ ರಿಯಾರ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು, ಮುಹಮ್ಮದ್ ಯು.ಬಿ., ಸುಲ್ತಾನ್ ಬಿಲ್ಡರ್ಸ್, ಅಸ್ಪರ್ ಹುಸೈನ್ ಬೆಂಗರೆ, ಅಸ್ಲಂ ಗೂಡಿನಬಳಿ ಮೊದಲಾದವರು ಉಪಸ್ಥಿತರಿದ್ದರು.