ಕಾಪು: ಸರ್ಟಿಫಿಕೇಟ್ ಕೋರ್ಸ್ ಪರೀಕ್ಷೆ ಉದ್ಘಾಟನೆ

Update: 2018-01-18 17:06 GMT

ಕಾಪು, ಜ.18: ಜಮಾಅತೆ ಇಸ್ಲಾಮಿ ಹಿಂದ್‌ನ ಅಂಗ ಸಂಸ್ಥೆಯಾದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ಕಾಪು ವರ್ತುಲದ ಸರ್ಟಿಫಿಕೇಟ್ ಕೋರ್ಸ್‌ನ ಪರೀಕ್ಷೆ ಕಾಪುವಿನ ಹಿರಾ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ನಡೆಯಿತು.

ಮುಹಮ್ಮದ್ ಇಕ್ಬಾಲ್ ಸಾಹೇಬ್ ಕುರ್‌ಆನ್ ಪಠಿಸಿದರು. ಈ ಕೋರ್ಸ್‌ನ 2018ರ ಸಾಲಿನಲ್ಲಿ ರಾಜ್ಯಾದ್ಯಂತ 16,300 ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಯಸ್ಸಿನ ಬೇಧವಿಲ್ಲದೆ ಪರೀಕ್ಷೆಗೆ ಕುಳಿತಿದ್ದು, 2002ರಲ್ಲಿ ಈ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭವಾಗಿದೆ ಎಂದು ಜಿಐಎಚ್ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಎಂ.ಸಲೀಂ ಸಾಹೇಬ್ ಉಚ್ಚಿಲ, ಮುಹಮ್ಮದ್ ಇಬ್ರಾಹಿಂ ಪೈಲ್ವಾನ್ ಮಾತನಾಡಿ ಶುಭಕೋರಿದರು. ಮುಹಮ್ಮದ್ ಅಲಿ ಪಾಂಗಾಳ, ಶಾಬುದ್ದೀನ್ ಸಾಹೇಬ್ ಕಾಪು, ಮುಹಮ್ಮದ್ ಅಲಿ ಮನಿಯಾರಿ, ಮುಹಮ್ಮದ್ ಹಾಶಿಮ್, ಸಂಚಾಲಕಿ ಶೆಹನಾಝ್ ಕಾಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News