ಅಮೆರಿಕದ ದಕ್ಷಿಣದಲ್ಲಿ ಶೀತ ಬಿರುಗಾಳಿ; 4 ಸಾವು

Update: 2018-01-18 17:27 GMT

ಅಟ್ಲಾಂಟ (ಅಮೆರಿಕ), ಜ. 18: ಅಮೆರಿಕದ ದಕ್ಷಿಣ ಭಾಗದಲ್ಲಿ ಶೀತ ಬಿರುಗಾಳಿ ಬೀಸಿದ್ದು, ಈ ವಲಯದ ಹಲವು ಭಾಗಗಳಲ್ಲಿ ಉಷ್ಣತೆ ದಾಖಲೆ ಪ್ರಮಾಣದಲ್ಲಿ ಕುಸಿದಿದೆ.

ಈ ಪ್ರದೇಶದಲ್ಲಿ ರಸ್ತೆಗಳು ಹಿಮಾವೃತವಾಗಿವೆ ಹಾಗೂ ವಿದ್ಯುತ್ ತಂತಿಗಳು ಕಡಿದುಬಿದ್ದಿವೆ. ಸರಕಾರಿ ಶಾಲೆಗಳಿಗೆ ರಜೆ ಸಾರಲಾಗಿದೆ.

ಶೀತ ಮಾರುತದ ಹೊಡೆತಕ್ಕೆ ಸಿಲುಕಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

ದೇಶದ ಅತ್ಯಂತ ನಿಬಿಡ ವಿಮಾನ ನಿಲ್ದಾಣವಾಗಿರುವ ಅಟ್ಲಾಂಟದ ಹ್ಯಾಟ್ಸ್‌ಫೀಲ್ಡ್-ಜಾಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸುಮಾರು 470 ವಿಮಾನಗಳನ್ನು ರದ್ದುಪಡಿಸಲಾಗಿದೆ. ಸಾಮಾನ್ಯವಾಗಿ ಈ ವಿಮಾನ ನಿಲ್ದಾಣವು ಪ್ರತಿ ದಿನ 2,700 ವಿಮಾನಗಳ ಹಾರಾಟ ಮತ್ತು ಭೂಸ್ಪರ್ಶಗಳನ್ನು ನಿಭಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News