ಮೆಕ್ಸಿಕೊ ಗಡಿಯುದ್ದಕ್ಕೆ ಗೋಡೆ ಕಟ್ಟುವ ನಿರ್ಧಾರದಲ್ಲಿ ಬದಲಾವಣೆಯಿಲ್ಲ : ಟ್ರಂಪ್

Update: 2018-01-18 17:34 GMT

ವಾಶಿಂಗ್ಟನ್, ಜ. 18: ಮೆಕ್ಸಿಕೊ ಗಡಿಯುದ್ದಕ್ಕೂ ಗೋಡೆ ಕಟ್ಟುವ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ.

 ಅದೇ ವೇಳೆ, ಈ ತಡೆಗೋಡೆಗೆ ‘ನೇರವಾಗಿ ಅಥವಾ ಪರೋಕ್ಷವಾಗಿ’ ಮೆಕ್ಸಿಕೊ ಹಣ ಕೊಡುತ್ತದೆ ಎಂಬುದಾಗಿಯೂ ಹೇಳಿದ್ದಾರೆ.

 ‘‘ಗೋಡೆ ಗೋಡೆಯೇ. ನಾನು ಆ ಬಗ್ಗೆ ಯೋಚಿಸಿದ ಮೊದಲ ದಿನದ ನಂತರದಿಂದ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಅಥವಾ ಪರಿವರ್ತನೆಯಾಗಿಲ್ಲ’’ ಎಂದು ಮುಂಜಾನೆ ಬರೆದ ಎರಡು ಟ್ವೀಟ್‌ಗಳಲ್ಲಿ ಟ್ರಂಪ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News