×
Ad

ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಗೆ 'ರಾಷ್ಟ್ರೀಯ ಮಾನ್ಯತೆ ಮಂಡಳಿ ಆಸ್ಪತ್ರೆ' ಗೌರವ

Update: 2018-01-19 19:15 IST

ಮಂಗಳೂರು, ಜ. 19: ನಗರದ ಕೊಡಿಯಾಲ್‌ಬೈಲಿನಲ್ಲಿರುವ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಗೆ 2018ರ ಜ.8ರಿಂದ ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ ಎಂದು ಮಾನ್ಯತೆ ದೊರಕಿದೆ.

ಈ ಮಾನ್ಯತೆಯನ್ನು ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ ಮತ್ತು ಆರೋಗ್ಯ ರಕ್ಷಣೆಯವರು ಯೆನೆಪೊಯ ಆಸ್ಪತ್ರೆಯ ಉತ್ತಮ ಗುಣಮಟ್ಟವನ್ನು ಗಮನಿಸಿ ನೀಡಿದ್ದಾರೆ.

ದೇಶಾದ್ಯಂತ 1200 ಕ್ಕೂ ಮಿಕ್ಕಿ ಅರ್ಜಿದಾರರಲ್ಲಿ ಕೇವಲ 491 ಆಸ್ಪತ್ರೆಗಳಿಗೆ ಮಾತ್ರ ಈ ಮಾನ್ಯತೆ ದೊರಕಿದೆ. ಮಂಗಳೂರಿನ 2ನೇ ಕಾರ್ಪೊರೇಟ್ ಸ್ಪೆಷಾಲಿಟಿ ಆಸ್ಪತ್ರೆಯಾಗಿರುವ ಯೆನೆಪೊಯ ಆಸ್ಪತ್ರೆಗೆ ದೊರಕಿದ ಈ ಪ್ರತಿಷ್ಠಿತ ಮಾನ್ಯತೆಯು ಹೆಮ್ಮೆ ಹಾಗೂ ಗೌರವದ ವಿಷಯವಾಗಿದೆ.

ಡಿಸೆಂಬರ್ 2016ರಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ ಯೋಜನೆಯು ಪ್ರಾರಂಭಗೊಂಡಿತ್ತು. ಎರಡು ಹಂತದ ಮೌಲ್ಯ ಮಾಪನಗಳ ಮೂಲಕ ಈ ಆಯ್ಕೆ ನಡೆದಿದೆ. ರಾಷ್ಟ್ರೀಯ ಮಾನ್ಯತಾ ಮಂಡಳಿ ಮತ್ತು ಆರೋಗ್ಯ ರಕ್ಷಣೆಯು ಭಾರತದ ಆಸ್ಪತ್ರೆಗಳ ಗುಣಮಟ್ಟದ ಕೌನ್ಸಿಲ್‌ನ ಘಟಕವಾಗಿದೆ.

ಗುಣಮಟ್ಟ, ರೋಗಿಯ ಸುರಕ್ಷತೆ, ರೋಗಿಯ ಆರೈಕೆಗೆ ದಕ್ಷತೆ ಮತ್ತು ಹೊಣೆಗಾರಿಕೆ ಆಗುವಲ್ಲಿ ಬದ್ಧತೆ, ಶಿಷ್ಠಚಾರ ನಿಯಮಾವಳಿಗಳ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ನೀತಿಗಳು, ರೋಗಿಯ ಆರೈಕೆ, ಔಷಧಿ ನಿರ್ವಹಣೆ, ರೋಗಿಯ ಸುರಕ್ಷತೆ, ವೈದ್ಯಕೀಯ ಫಲಿತಾಂಶ ಗಳು, ವೈದ್ಯಕೀಯ ದಾಖಲೆಗಳು, ಸೋಂಕು ನಿಯಂತ್ರಣ ಮತ್ತು ಸಿಬ್ಬಂದಿ ಇವುಗಳ ಸ್ಥಾಪನೆ ಹೀಗೆ ಆಸ್ಪತ್ರೆಯ ಗುಣಮಟ್ಟವನ್ನು ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News