ಗಾಳಿಯ ರಭಸಕ್ಕೆ ಸೈಕಲ್ ಜೊತೆಗೆ ಹಾರಿದ ಸವಾರ!

Update: 2018-01-19 15:05 GMT

ನೆದರ್ ಲ್ಯಾಂಡ್, ಜ.19: ಉತ್ತರ ಯುರೋಪ್ ಹಾಗು ನೆದರ್ ಲ್ಯಾಂಡ್ ನಾದ್ಯಂತ ಭಾರೀ ಗಾಳಿ ಬೀಸುತ್ತಿದ್ದ, ಗಾಳಿಯ ರಭಸಕ್ಕೆ ಕಂಟೈನರ್ ಗಳೇ ಬಿದ್ದ ಘಟನೆಗಳು ನಡೆದಿವೆ.

ಹೆದ್ದಾರಿಗಳಲ್ಲಿ ನಡೆದಾಡುವ ಜನರನ್ನು ಗಾಳಿಯು ಎಳೆದೊಯ್ಯುತ್ತಿದ್ದು, ಸೈಕಲ್ ಸವಾರನೊಬ್ಬ ಸೈಕಲ್ ಜೊತೆಗೆ ಹಾರಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇಲ್ಲಿ ಸರಿಯಾಗಿ ನಡೆದಾಡಲು ಸಾಧ್ಯವಾಗದೆ ಜನರು ಪರದಾಡುವಂತಾಗಿದೆ. ರಸ್ತೆ ಬದಿ ಜನರು ಬೀದಿ ದೀಪಗಳ, ಟ್ರಾಫಿಕ್ ಲೈಟ್ ಗಳ ಕಂಬವನ್ನು ಹಿಡಿದುಕೊಳ್ಳುತ್ತಿದ್ದು, ಗಾಳಿಯ ರಭಸದಿಂದಾದ ಅನಾಹುತಗಳ ವಿಡಿಯೋಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News