×
Ad

ಮಂಗಳೂರು: ಹತ್ಯೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಸೆರೆ

Update: 2018-01-19 22:23 IST

ಮಂಗಳೂರು, ಜ.19: ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಅಝೀಝ್ ಕಾಟಿಪಳ್ಳ ಮತ್ತು ಅಝೀಮ್ ಕಾಟಿಪಳ್ಳ ಎಂಬವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜ. 24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾಟಿಪಳ್ಳದಲ್ಲಿ ಜ.3ರಂದು ದೀಪಕ್ ರಾವ್ ಕೊಲೆ ಪ್ರಕರಣ ನಡೆದಿತ್ತು. ಪೊಲೀಸರು ಉಲ್ಲಂಜೆಯ ಮುಹಮ್ಮದ್ ನೌಷಾದ್ ಹಾಗೂ ಕೃಷ್ಣಾಪುರದ ಮುಹಮ್ಮದ್ ಇರ್ಷಾನ್, ಪಿಂಕಿ ನವಾಝ್, ಕಾಟಿಪಳ್ಳದ ರಿಝ್ವಾನ್ ಯಾನೆ ರಿಜ್ಜುವನ್ನು ಬಂಧಿಸಿದ್ದರು.

ಕಾರ್ಯಾಚರಣೆ ವೇಳೆ ಪೊಲೀಸರ ಗುಂಡೇಟಿನಿಂದ ಕಾಲಿಗೆ ಗಾಯಗೊಂಡಿದ್ದ ಕೃಷ್ಣಾಪುರದ ಪಿಂಕಿ ನವಾಝ್, ಕಾಟಿಪಳ್ಳದ ರಿಝ್ವಾನ್ ಯಾನೆ ರಿಜ್ಜು ಇನ್ನೂ ಆಸ್ಪತ್ರೆಯಲ್ಲಿದ್ದರೆ, ಇರ್ಷಾನ್ ಮತ್ತು ನವಾಝ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದ ಅಝೀಝ್ ಮತ್ತು ಅಝೀಮ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೂ ಜ.24ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News