ಅತಿ ವಿಷಕಾರಿ ಬಂಕರ್ ತೈಲ ಸೋರಿಕೆ ಸಾಧ್ಯತೆ: ಚೀನಾ

Update: 2018-01-19 17:33 GMT

ಬೀಜಿಂಗ್, ಜ. 19: ಪೂರ್ವ ಚೀನಾ ಸಮುದ್ರದಲ್ಲಿ ರವಿವಾರ ಮುಳುಗಿರುವ ಇರಾನ್‌ನ ತೈಲ ಹಡಗಿನಿಂದ ಬಂಕರ್ ಇಂಧನ ಈಗ ಸೋರಿಕೆಯಾಗುತ್ತಿರಬಹುದು ಎಂದು ಚೀನಾದ ಸರಕಾರಿ ಸಾಗರ ಆಡಳಿತ ಇಲಾಖೆ ಹೇಳಿದೆ.

ಈ ಹಿಂದೆ ಪತ್ತೆಯಾಗದ ಹಲವಾರು ಸೋರಿಕೆಗಳನ್ನು ದುರಂತ ಸ್ಥಳದ ಸಮೀಪ ವಿಮಾನಗಳು, ಹಡಗುಗಳು ಮತ್ತು ಉಪಗ್ರಹಗಳು ಪತ್ತೆಹಚ್ಚಿವೆ ಎಂದು ಗುರುವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಇಲಾಖೆ ತಿಳಿಸಿದೆ.

ಈ ಪೈಕಿ ಒಂದು ಪ್ರಕರಣದಲ್ಲಿ, ದುರಂತ ಸ್ಥಳದಿಂದ 2.5 ಕಿಲೋಮೀಟರ್ ಪೂರ್ವದಲ್ಲಿ ಅತ್ಯಂತ ವಿಷಕಾರಿ ಬಂಕರ್ ತೈಲ ಸೋರಿಕೆಯಾಗಿರುವ ಸಾಧ್ಯತೆ ಗೋಚರಿಸಿದೆ ಎಂದಿದೆ.

ಕಳೆದ ವಾರ ಅದು ಹಾಂಕಾಂಗ್‌ನ ಸರಕು ಹಡಗೊಂದಕ್ಕೆ ಢಿಕ್ಕಿಯಾದಾಗ ಸುಮಾರು 1,000 ಟನ್ ಬಂಕರ್ ತೈಲವನ್ನು ಹೊಂದಿತ್ತು ಎಂಬುದಾಗಿ ಪರಿಣತರು ಲೆಕ್ಕಹಾಕಿದ್ದಾರೆ.

ಬಂಕರ್ ತೈಲ ಸಾಗರ ಜೀವಿಗಳಿಗೆ ಅಪಾಯಕಾರಿಯಾಗಿದೆ ಹಾಗೂ ಅದು ಒಮ್ಮೆ ಸೋರಿಕೆಯಾದರೆ ಸಮುದ್ರದಿಂದ ಅದನ್ನು ತೆಗೆಯುವುದು ಕಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News