ಚೀನಾ: ಕಳೆದ ವರ್ಷ ಜನನ ದರದಲ್ಲಿ ಕಡಿತ

Update: 2018-01-19 17:37 GMT

ಬೀಜಿಂಗ್, ಜ. 19: ಚೀನಾ ತನ್ನ ಕುಟುಂಬ ಯೋಜನೆ ನೀತಿಗಳಲ್ಲಿ ಸಡಿಲಿಕೆ ಮಾಡಿ ದಂಪತಿಗಳಿಗೆ ಎರಡನೆ ಮಗುವನ್ನು ಹೊಂದುವ ಅವಕಾಶ ನೀಡಿರುವ ಹೊರತಾಗಿಯೂ, ಕಳೆದ ವರ್ಷ ಚೀನಾದ ಜನನ ದರದಲ್ಲಿ ಕಡಿತ ಉಂಟಾಗಿದೆ.

ಕಳೆದ ವರ್ಷ ದೇಶದಲ್ಲಿ 1.72 ಕೋಟಿ ಮಕ್ಕಳು ಹುಟ್ಟಿದ್ದಾರೆ. ಇದು 2016ರಲ್ಲಿ ಹುಟ್ಟಿದ 1.79 ಮಕ್ಕಳಿಗಿಂತ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಬ್ಯೂರೊ ಗುರುವಾರ ವರದಿ ಮಾಡಿದೆ.

ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News