ಪೆರ್ಮನ್ನೂರು: ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆಯ ಅಂಗವಾಗಿ ಕೃತಜ್ಞಾತಾ ಪೂಜೆ

Update: 2018-01-19 17:44 GMT

ಉಳ್ಳಾಲ, ಜ. 19: ಇಲ್ಲಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋನ್ಸವ ಸಂಭ್ರಮದ ಪ್ರಥಮ ದಿನವಾದ ಶುಕ್ರವಾರ ಧರ್ಮಕೇಂದ್ರದ ಸಮೂಹ ಶಿಕ್ಷಣ ಸಂಸ್ಥೆಗಳ ದಿನಾಚರಣೆಯ ಅಂಗವಾಗಿ ಕೃತಜ್ಞಾತಾ ಪೂಜೆ ಧರ್ಮಕೇಂದ್ರದಲ್ಲಿ ನಡೆಯಿತು.

ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ ಫ್ರಾನ್ಸಿಸ್ ಸೆರಾವೊ ಪೂಜೆ ನೆರವೇರಿಸಿ ಶಿಕ್ಷಣ ಸಂಸ್ಥೆಗಳು ಜಾತಿ ಮತ ಭೇದ ಮರೆತು ಇತರರಿಗೆ ಬೆಳಕು ನೀಡುವ ದೀಪವಾಗಬೇಕು ಎಂದರು.

ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಧರ್ಮಗುರು ವಂ ಡಾ ಜೆ. ಬಿ. ಸಲ್ಡಾನ್ಹಾ , ಕಥೋಲಿಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಂದನೀಯ ಜೆರಾಲ್ಡ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಸಹಾಯಕ ಧರ್ಮಗುರುಗಳಾದ ಫಾ. ಸ್ಟ್ಯಾನಿ ಪಿಂಟೊ, ಫಾ. ಲೈಝಿಲ್ ಡಿ’ಸೋಜ, ಸಂತ ಸೆಬೆಸ್ಟಿಯನ್ ಶಿಕ್ಷಣ ಸಂಸ್ಥೆಗಳು ಪ್ರಾಂಶುಪಾಲ ಫಾ. ಎಡ್ವಿನ್ ಮಸ್ಕರೇನಸ್, ವಂ ಫೆಲಿಕ್ಸ್ ನೊರೊನ್ಹಾ , ಧರ್ಮ ಭಗಿನಿಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News