ಬಂಟ್ವಾಳ: ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2018-01-19 17:53 GMT

ಬಂಟ್ವಾಳ, ಜ. 19: ವಿಟ್ಲ ಪಟ್ಟಣ ಪಂಚಾಯತ್ ಶಾಲೆಗೆ ಸೇರಿದ ಖಾಸಗಿ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಿ ವಿದ್ಯಾ ಸಂಸ್ಥೆಗಳ ಕಲಿಕಾ ವಾತಾವರಣ ವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಿಠಲ ವಿದ್ಯಾ ಸಂಘದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ವಿಠಲ ಪದವಿ ಪೂರ್ವ ಕಾಲೇಜಿನಿಂದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಮೆರವಣಿಗೆ ಮೂಲಕ ವಿಟ್ಲ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ ಹಾಗೂ ನಾಡಕಚೇರಿಯಲ್ಲಿ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ವಿಠಲ ವಿದ್ಯಾ ಸಂಘದ ಉಪಾಧ್ಯಕ್ಷ ಕ.ಶಿ ವಿಶ್ವನಾಥ್, ವಿಟ್ಲ ಸೀಮೆಯ ಅರಸರಾದ ರವಿವರ್ಮ ಕೃಷ್ಣರಾಜ ಅರಸರ ನಾಯಕತ್ವದಲ್ಲಿ ದಾನವಾಗಿ ನೀಡಿದ ಜಾಗವಾಗಿರುತ್ತದೆ. ಇದಕ್ಕೆ ಸಂಬಂಧಪಟ್ಟ ದಾಖಲೆ ನಮ್ಮಲ್ಲಿದೆ. ಆದರೆ ವಿಟ್ಲ ಪಟ್ಟಣ ಪಂಚಾಯತ್ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತರದೇ ಇಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಮುಂದಾಗಿದೆ. ಅದಲ್ಲದೇ ಪಪಂ ಅಧ್ಯಕ್ಷರು ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾಗಿದ್ದರೂ ಕೂಡಾ ನಮ್ಮ ಗಮನಕ್ಕೆ ತರದೆ ಏಕಾಏಕಿ ನಿರ್ಧಾರ ಕೂಗೊಂಡಿದ್ದಾರೆ ಎಂದು ಆರೋಪಿಸಿದರು.

ಶಾಲಾ ಪ್ರವೇಶ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ನಿರ್ಮಾಣ ಮಾಡಿದರೆ, ಘನ ವಾಹನಗಳ ಕರ್ಕಶ ಶಬ್ದ ಮಾಲಿನ್ಯದಿಂದ ಮಕ್ಕಳಿಗೆ ಕೊಠಡಿಯಲ್ಲಿ ಅಧ್ಯಯನಕ್ಕೆ ತೊಂದರೆಯಾಗಲಿದೆ ಎಂದು ಅವರು ಹೇಳಿದರು.

ವಿಠಲ ವಿದ್ಯಾ ಸಂಘದ ಅಧ್ಯಕ್ಷ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಎಂ. ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ವಿಠಲ ಕೂಜ ಪ್ಪಾಡಿ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಯಶವಂತ ವಿಟ್ಲ, ಉಪಾನ್ಯಾಸಕ ರಾದ ಶಂಕರ್‌ನಾರಾಯಣ ಭಟ್, ಅಣ್ಣಪ್ಪ ಸಾಸ್ತಾನ, ಪ್ರಕಾಶ್, ಸುಚೇತನ ಜೈನ್, ವಿದ್ಯಾರ್ಥಿ ಮುಖಂಡರಾದ ರೋಹಿತ್, ಸ್ವಾತಿ, ಅಝೀಮತ್ ನೂರಿಯಾ, ಚೈತ್ರೇಸ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News