'ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಮಹತ್ವದ್ದು'

Update: 2018-01-19 17:57 GMT

ಉಳ್ಳಾಲ, ಜ. 19: ಬಹಳಷ್ಟು ಶಿಕ್ಷಣ ಕೇಂದ್ರಗಳನ್ನು ಕ್ರೈಸ್ತ ಸಮುದಾಯದವರು ತೆರದಿರುವುದರಿಂದ ಬಹಳಷ್ಟು ಮಂದಿ ಶಿಕ್ಷಿತರಾಗಿ ಹೊರಬರಲು ಸಾಧ್ಯವಾಯಿತು. ಧಾರ್ಮಿಕ ನಂಬಿಕೆಯನ್ನು ಗಟ್ಟಿಗೊಳಿಸಲು ಚರ್ಚ್‌ಗಳ ನಿರ್ಮಾಣಗೊಂಡು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದು ಕೂಡಾ ಅವರ ಸಾಧನೆಯಾಗಿದೆ ಎಂದು ಡಿಡಿಪಿಐ ವೈ.ಶಿವರಾಮಯ್ಯ ಹೇಳಿದರು.

 ಅವರು ತೊಕ್ಕೊಟ್ಟುವಿನಲ್ಲಿ ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಸೆಬೆಸ್ಟಿಯನ್ ಚರ್ಚ್ ವಠಾರದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಾನವ ಸಮುದಾಯ ಬೆಳವಣಿಗೆ ಒಂದು ವಿಶೇಷವಾಗಿದೆ. ಭೂಲೋಕದಲ್ಲಿ ವಿವಿಧ ಪ್ರಾಣಿಗಳ ಬದುಕು ವಿವಿಧ ತರದಲ್ಲಿದ್ದರೆ , ಮಾನವ ಮಾತ್ರ ಬದುಕಿನಲ್ಲಿ ಏಕ ಹಾದಿಯನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಇದಕ್ಕೆ ಕಾರಣ ಮಾನವನಿಗಿರುವ ಜ್ಞಾನ ಶಕ್ತಿ. ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಮಾನವನಿಗೆ ಇರುವುದರಿಂದ ತನ್ನ ಸ್ಥಾನದಲ್ಲಿದ್ದುಕೊಂಡು ಜೀವನ ಸಾಗಿಸುತ್ತಾನೆ. ಸಂತ ಸೆಬೆಸ್ಟಿಯನ್ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಜತೆಗೆ ಶೈಕ್ಷಣಿಕ ಕೇಂದ್ರಗಳಿವೆ. ಜನರಿಗೆ ಶಿಕ್ಷಣ ಪಡೆಯಲು ಹಲವು ಶಿಕ್ಷಣ ಸಂಸ್ಥೆಗಳನ್ನು ಮತ್ತು ಧಾರ್ಮಿಕ ಕ್ಷೇತ್ರಗಳನ್ನು ಬೆಳೆಸಿದ ಕೀರ್ತಿ ಅದು ಕ್ರೈಸ್ತ ಸಮುದಾಯಕ್ಕೆ ಸಲ್ಲುತ್ತದೆ ಎಂದರು.

ಕ್ಯಾಥೊಲಿಕ್ ಬೋರ್ಡ್ ಎಜುಕೇಶನ್‌ನ ಫಾ. ಜೆರಾಲ್ಡ್ ಡಿ ಸೋಜ ಮಾತನಾಡಿ, ಧಾರ್ಮಿಕ ಮೌಲ್ಯಗಳನ್ನು ಉಳಿಸುವ ಉದ್ದೇಶದಿಂದ ಚರ್ಚ್ ನಿರ್ಮಾಣವಾಗಿದೆ. ಈ ಚರ್ಚ್‌ಗೆ ಈಗ 100 ವರ್ಷ ಸಂದಿದೆ. ಚರ್ಚ್ ಮುಖ್ಯ ಕೇಂದ್ರದಲ್ಲಿ ಇದ್ದ ಕಾರಣ ಬಹಳಷ್ಟು ಮಂದಿಗೆ ಧಾರ್ಮಿಕ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಯಿತು. ಧಾರ್ಮಿಕ ಮೌಲ್ಯಗಳನ್ನು ಕಾಪಾಡಲು, ಆಚರಣೆಗಳಲ್ಲಿ ನಂಬಿಕೆ, ವಿಶ್ವಾಸಗಳನ್ನು ಗಳಿಸಲು ಧಾರ್ಮಿಕ ಕ್ಷೇತ್ರಗಳ ಪಾತ್ರ ಬಹಳಷ್ಟು ಇದೆ ಎಂದರು.

ಡಾ. ಜಾನ್ ಬಾಪಿಸ್ಟ್ ಸಲ್ದಾನ ಮಾತನಾಡಿ, ಸಂತ ಸೆಬೆಸ್ಟಿಯನ್‌ನಲ್ಲಿ ಕೇವಲ ಚರ್ಚ್ ಮತ್ತು ಶಿಕ್ಷಣ ಕೇಂದ್ರಗಳು ಮಾತ್ರ ಇರುವುದಲ್ಲ. ಇಲ್ಲಿ 50 ಅದಿಕ ಶಿಕ್ಷಕರು, 3000 ವಿದ್ಯಾರ್ಥಿಗಳು ಇದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಇದೇ ಶಾಲೆಯಲ್ಲಿ ಕಲಿತು ಉನ್ನತ ಹಂತಕ್ಕೆ ತಲುಪಿದ್ದಾರೆ. ಇದೀಗ ಇದೇ ಚರ್ಚ್‌ಗೆ 100 ವರ್ಷ ಸಂದಾಯವಾಗಿದೆ. ಇಷ್ಟು ವರ್ಷಗಳಲ್ಲಿ ಏನಲ್ಲೆ ಕೆಲಸಗಳು ಆಗಿದೆಯೋ ಅದಕ್ಕಿಂತ ಹೆಚ್ಚು ಕೆಲಸ ಇನ್ಮುಂದೆ ಆಗಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದರು.

ಡಾ. ಫ್ರಾನ್ಸಿಸ್ ಸೆರಾವೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎಂ.ಪಿ. ಜ್ಞಾನೇಶ್, ನಗರಸಭೆಯ ಸಿ.ಓ. ವಾಣಿ ಆಳ್ವ, ರಿಟಾ ವಾಸ್, ಲಿಲ್ಲಿ ಅಂಜ್ ಬಿಎಸ್, ಮೋನಿಕಾ ಪಿಂಟೊ, ಜೆನೆವ್ಯೋ ಪಿಂಟೋ, ಇಡಾ ಡಿ ಸೋಜ, ಮಟಿಲ್ಡಾಡಿ ಸೋಜ, ಜೆಸಿಂತಾಡಿಸೋಜ, ಫಾ. ಕ್ಲೆಮೆಂಟ್ ಮಸ್ಕರೇನಸ್, ಫಾ. ಆಲ್ಡನ್‌ಡಿ ಸೋಜ, ಫಾ. ಫ್ರಾನ್ಸಿಸ್ ಕೋರ್ನಾಲಿಯೋ, ರೆ. ಮಾರಿಬೆಲ್ ಬಿಎಸ್, ಇದಾ ಬಿಎಸ್, ಜೋಸೆಫಿನ್ ತೌರೋ ಬಿಎಸ್, ಎಮೇರಿಟಾ ಬಿಎಸ್, ಲಿಲ್ಲಿ ಪಿಂಟೋ ಯುಎಫ್‌ಎಸ್, ಅನಿತಾ ಲೈದಿಯಾ ಬಿಎಸ್, ಲೈದಿಯಾ ಪಿಂಟೋಬಿಎಸ್, ಪ್ರಮೋದ್ ಕುಮಾರ್ ಪಿ, ಗಂಗಾಧರ್ ಉಳ್ಳಾಲ, ದಿನಕರ್ ಉಳ್ಳಾಲ್, ಜಾರ್ಜ್ ಮೊಂತೇರೋ, ಮೌರೀಸ್ ಮೊಂತೇರೊ, ಸೈಲ್ವಿನ್ ಸಿಕ್ವೇರ ಬಿಎಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News