ಸೌಹಾರ್ದಯುತ ಸಮಾಜದ ನಿರ್ಮಾಣದಲ್ಲಿ ಸಂಘ, ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ: ಡಾ.ಡಿ. ವೀರೇಂದ್ರ ಹೆಗ್ಗಡೆ
ಉಳ್ಳಾಲ, ಜ. 20: ಉತ್ತಮ ಸೌಹಾರ್ದಯುತ ಸಮಾಜದ ನಿರ್ಮಾಣದಲ್ಲಿ ಸಂಘ, ಸಂಸ್ಥೆಗಳ ಪಾತ್ರವೂ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನದೊಂದಿಗೆ ಮಾದರಿ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಸಂತ ಸೆಬಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನ ಶತಮಾನೋತ್ಸವ ಸಂಭ್ರಮ 1918-2018 ಇದರ ಸೌಹಾರ್ದ ಸಮ್ಮಿಲನ ಸರ್ವಧರ್ಮ ಸಾಮರಸ್ಯ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೌಹಾರ್ದ ಆಶೀರ್ವಚನ ನೀಡಿದರು.
ನಾವೆಲ್ಲ ಬೇರೆ ಬೇರೆ ಧರ್ಮದವರು ಆದರೂ ಪ್ರತಿಯೊಂದು ಧರ್ಮವೂ ಶ್ರೇಷ್ಠವಾಗಿದೆ ಎಂಬ ಮನೋಭಾವನೆ ನಮ್ಮದಾಗಬೇಕು. ನಾವು ಅನುಸರಿಸುವ ಧರ್ಮವನ್ನು ಸರಿಯಾಗಿ ಪಾಲನೆ ಮಾಡುವುದರೊಂದಿಗೆ ಪ್ರೀತಿ ವಾತ್ಸಲ್ಯದ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು.
ಸೇರಂಪೋರ್ ವಿಶ್ವವಿದ್ಯಾನಿಲಯ, ಸೇರಂಪೋರ್ ಪಶ್ಚಿಮ ಬಂಗಾಳ ಇದರ ಕುಲಪತಿ ಅತಿ ವಂದನೀಯ ಡಾ ಜೆ.ಎಸ್. ಸದಾನಂದ ಮಾತನಾಡಿ, ನಾವೆಲ್ಲ ದೇವರ ನಿರ್ಮಾಣದ ಒಂದು ಅಂಗ. ಸಮಾಜ ನಿರ್ಮಾಣದಲ್ಲಿ ದೇವರೊಂದಿಗೆ ನಾವು ಸಹ ಕಾರ್ಮಿಕರು ಈ ನಿಟ್ಟಿನಲ್ಲಿ ಸರ್ವಧರ್ಮಗಳ ಬಾಂಧವ್ಯದ ಜೊತೆಗೆ ಜೀವನದ ಹಾದಿಯನ್ನು ಕ್ರಮಿಸುವ ಕಾರ್ಯ ನಾವು ಮಾಡಬೇಕು ಎಂದರು.
ಮೊಹಿಯುದ್ದೀನ್ ಜಮಾ ಮಸೀದಿ ಕೂಳೂರು ಇದರ ಖತೀಬ್ ಕೆ.ಎ. ಬಶೀರ್ ಮದನಿ ಅಲ್ ಖಾಮಿಲ್ ಮಾತನಾಡಿ ಒಂದು ಕಾಲದಲ್ಲಿ ಮಾದರಿಯಾದ ಜಿಲ್ಲೆ ಇದಾಗಿತ್ತು. ಎಲ್ಲಾ ಧರ್ಮದವರು ಇಲ್ಲಿ ಸೌಹಾರ್ದ ಜೀವನದೊಂದಿಗೆ ಪ್ರೀತಿ ಪ್ರೇಮದಿಂದ ಇದ್ದು, ಇತ್ತೀಚಿನ ದಿನಗಳಲ್ಲಿ ಸೌಹಾರ್ದ ಕೆಡಿಸುವ ಕಾರ್ಯ ಆಗುತ್ತಿರುವುದು ಖೇದನೀಯ ಇಂತಹ ಸಂದರ್ಭದಲ್ಲಿ ಸೌಹಾರ್ದ ಸಮ್ಮಿಲನ ಕಾರ್ಯಕ್ರಮಗಳು ಹಿಂದಿನ ಗತ ವೈಭವವನ್ನು ಸಾರಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿ ವಂ. ಡಾ ಎಲೋಶಿಯಸ್ ಪಾವ್ಲ್ ಡಿಸೋಜ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಮದನಿ ದರ್ಗಾ ಉಳ್ಳಾಲ ಇದರ ಅಧ್ಯಕ್ಷ ಅಬ್ದುಲ್ ರಶೀದ್, ಡಿವೈನ್ ಪ್ರಾರ್ಥನಾ ಕೇಂದ್ರ ತೊಕ್ಕೊಟಿನ ನಿರ್ದೇಶಕ ವಂ ಜೋಸೆಫ್ ವಣಿಯಂತಾರ, ಬಿಷಪ್ ಸಾರ್ಜೆಂಟ್ ಮೆಮೋರಿಯಲ್ ಚರ್ಚ್ ಧರ್ಮ ಗುರು ತೊಕ್ಕೊಟ್ಟು ವಂ ಕುಮಾರ್ ಕೋಟ್ಯಾನ್, ಮಾಜಿ ಶಾಸಕರು ಕೆ. ಜಯರಾಮ ಶೆಟ್ಟಿ , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೆ.ಕೃಷ್ಣ ಗಟ್ಟಿ ಸೋಮೇಶ್ವರ, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಶ್ರೀ ಸೋಮನಾಥ ದೇವಸ್ಥಾನ ಸೋಮೇಶ್ವರ, ವ್ಯವಸ್ಥಾಪನಾ ಸಮಿತಿಯ ಅಧ್ಯ ವಿಶ್ವನಾಥ ಗಟ್ಟಿ ವಗ್ಗ, ಮೊಗವೀರ ಸಂಘ, ಉಳ್ಳಾಲದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ವಿದ್ಯಾರತ್ನ ಶಿಕ್ಷಣ ಸಂಸ್ಥೆ, ದೇರಳಕಟ್ಟೆ ಇದರ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ, ಉಳಿಯ ಇದರ ಮಾಜಿ ಆಡಳಿತ ಮೊಕ್ತೇಸರ ಯು.ಎಸ್. ಪ್ರಕಾಶ್, ಶ್ರೀ ಚೀರುಂಭ ಭಗವತಿ ಕ್ಷೇತ್ರ, ಉಳ್ಳಾಲ ಇದರ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಶ್ರೀ ಮಲರಾಯ ದೈವಸ್ಥಾನ, ಬಂಡಿಕೊಟ್ಯ, ಉಳ್ಳಾಲ ಇದರ ಆಡಳಿತ ಮೊಕ್ತೇಸರ ಸುಂದರ್ ಉಳ್ಳಾಲ್, ಶ್ರೀ ಕೋರ್ದಬ್ಬು ದೈವಸ್ಥಾನ, ಬಂಡಿಕೊಟ್ಯ, ಉಳ್ಳಾಲ ಇದರ ಗುರಿಕಾರ ರವೀಂದ್ರ ಉಳ್ಳಾಲ್, ಶ್ರೀ ವೀರಭದ್ರ ದುರ್ಗಾ ಪರಮೇಶ್ವರಿ ದೇವಸ್ಥಾನ ಉಳ್ಳಾಲದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ಉಳ್ಳಾಲ ನಗರಸಭೆ ಮಾಜಿ ಅಧ್ಯಕ್ಷೆ ಗಿರಿಜಾಬಾಯಿ, ದ.ಕ. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ, ಭಟ್ನಗರ, ತೊಕ್ಕೊಟ್ಟು ಇದರ ಟ್ರಸ್ಟಿ ರಾಜೀವ ಮೆಂಡನ್, ಶ್ರೀ ವಿಠೋಭ ರುಕ್ಮಾಯಿ ಮಂದಿರ ತೊಕ್ಕೊಟ್ಟು ಇದರ ಅಧ್ಯಕ್ಷ ಪದ್ಮನಾಭ ತೊಕ್ಕೊಟ್ಟು, ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನ, ಅಂಬಾವನ, ತೊಕ್ಕೊಟ್ಟು ಇದರ ಅಧ್ಯಕ್ಷ ಪುಷ್ಪರಾಜ್ ತೊಕ್ಕೊಟ್ಟು, ಅಧ್ಯಕ್ಷ, ಸದ್ಭಾವನಾ ವೇದಿಕೆ ಉಳ್ಳಾಲದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು, ಶಿವಾಜಿ ಫ್ರೆಂಡ್ಸ್ ಸರ್ಕಲ್, ಭಟ್ನಗರ, ತೊಕ್ಕೊಟ್ಟು ಇದರ ಅಧ್ಯಕ್ಷ ಸದಾನಂದ ಒಂಭತ್ತುಕೆರೆ, ಜಮಾಅತೆ ಇಸ್ಲಾಮಿ ಹಿಂದ್, ಉಳ್ಳಾಲದ ಅಧ್ಯಕ್ಷ ಅಬ್ದುಲ್ ಕರೀಮ್, ಇಸ್ಲಾಹಿ ಎಜುಕೇಷನ್ ಟ್ರಸ್ಟ್, ಉಳ್ಳಾಲದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಾಷಾ, ಕೋಸ್ಟಲ್ ಕಮ್ಯುನಿಕೇಶನ್ ನೆಟ್‌ವರ್ಕ್, ತೊಕ್ಕೊಟ್ಟು ಆಡಳಿತ ನಿರ್ದೇಶಕ ಗಣೇಶ್, ಪೊಸಕುರಲಿನ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಸಂತ ಸೆಬೆಸ್ಟಿಯನ್ ಚರ್ಚ್‌ನ ಚರ್ಚ್ ಪಾಲನಾ ಮಂಡಳಿಯ ಮಾಜಿ ಉಪಾಧ್ಯಕ್ಷರುಗಳಾದ ಲಾಯರಸ್ ಡಿಸೋಜ, ಹ್ಯಾರಿ ಟೆಲ್ಲಿಸ್, ಲೂಕಸ್ ಡಿಸೋಜ, ಅಗ್ನಿ ಬಾಯ್ಸಿ ತೊಕ್ಕೊಟ್ಟು ಇದರ ಅಧ್ಯಕ್ಷ ಅವಿನಾಶ್ ತೊಕ್ಕೊಟ್ಟು, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ಣವರ್ ಭಾಗವಹಿಸಿದ್ದರು.
ಸಂತ ಜೋಸೆಫ್ ವಾರ್ ವಲಯ, ಮಂಗಳೂರು ದಕ್ಷಿಣದ ಸರ್ವ ಧರ್ಮ ಗುರುಗಳು, ಪ್ರಧಾನ ಸಂಚಾಲಕರುಗಳಾದ ಶ್ರೀ ಚಿರುಂಭ ಭಗವತೀ ಕ್ಷೇತ್ರ ಉಳ್ಳಾಲ ಇದರ ಉಪಾಧ್ಯಕ್ಷ ಸುರೇಶ್ ಭಟ್ನಗರ, ಮೊಹಿಯುದ್ದೀನ್ ಜುಮಾ ಮಸೀದಿ, ಸಾಮಾಣಿಗೆ ಇದರ ಗೌರವಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ, ಶ್ರೀ ಅಯ್ಯಪ್ಪ ದೇವಸ್ಥಾನ ದೇರಳಕಟ್ಟೆ ಇದರ ಆಡಳಿತ ಮೊಕ್ತೇಸರ ಕೆ. ಚಂದ್ರಹಾಸ್ ಅಡ್ಯಂತಾಯ, ಧರ್ಮಜಾಗೃತಿ ಅಭಿಮಾನಿ ಬಳಗ, ಮಂಜೇಶ್ವರ-ಉಳ್ಳಾಲ ಇದರ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಮಂಗಳೂರು ತಾಲೂಕು ಪಂಚಾಯತ್, ಅಧ್ಯಕ್ಷ ಮಹಮ್ಮದ್ ಮೋನು ಪಾವೂರು, ಉಳ್ಳಾಲ ದರ್ಗಾ ಸಮಿತಿಯ ಮುಹಮ್ಮದ್ ತ್ವಾಹಾ, ಚರ್ಚ್ ಪಾಲನಾ ಪರಿಷತ್ತ್‌ನ ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಪ್ರಾಶುಂಪಾಲ ವಂ.ಫಾ.ಎಡ್ಮಿನ್ ಮಸ್ಕರೇನಸ್, ಶತಮಾನೋತ್ಸವ ಸಮಿತಿಯ ಸಂಯೋಜಕ ಡೆಮೆಟ್ರಿಯಸ್ ಜಿ. ಡಿಸೋಜ, ಸಹಾಯಕ ಧರ್ಮಗುರುಗಳಾದ ವಂ. ಫಾ.ಸ್ಯ್ಟಾನಿ ಪಿಂಟೊ, ವಂ.ಫಾ.ಲೈಝಿಲ್ ಡಿಸೋಜ, ನಿರ್ಮಲ ಕಾನ್ವೆಂಟ್ ಉಳ್ಳಾಲ ಇದರ ಧರ್ಮಗುರು ವಂ.ಫಾ. ಫೆಲಿಕ್ಸ್ ನೊರೋನ್ಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂತ ಸೆಬಾಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನ ಧರ್ಮಗುರುಗಳು ವಂ. ಡಾ.ಜೆ.ಬಿ. ಸಲ್ಡಾನ ಪ್ರಸ್ತಾವನೆಗೈದರು. ಚರ್ಚ್ ಪಾಲನಾ ಪರಿಷತ್ತ್‌ನ ಉಪಾಧ್ಯಕ್ಷ ಮೆಲ್ವಿನ್ ಸಿ. ಡಿಸೋಜ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಜೋಸ್ಲಿನ್ ಡಿಸೋಜ ಧನ್ಯವಾದ ಸಲ್ಲಿಸಿದರು.
ಪುತ್ತೂರು ಸೈಂಟ್ ಫಿಲೋಮಿನಾ ಶಿಕ್ಷಣ ಸಂಸ್ಥೆಯ ಶಿಕ್ಷಕ ರಾಜಶೇಖರ್ ಪುತ್ತೂರು ಹಾಗೂ ಸಂತ ಸೆಬಾಸ್ಟಿಯನ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.