ಕೋಟ: ಮಧುಮಗ ನಾಪತ್ತೆ
Update: 2018-01-20 21:57 IST
ಕೋಟ, ಜ.20: ರವಿವಾರ ನಡೆಯಲಿದ್ದ ಮದುವೆಯ ವರ ಕೋಟ ಬಾರಿಕೆರೆಯ ಅಬ್ದುಲ್ ಸತ್ತರ್ ಸಾಹೇಬ್ ಎಂಬವರ ಮಗ ಶೇಕ್ ಜಾವಿದ್ ಕೆ.ಎ.(30) ಎಂಬವರು ಜ.18ರಂದು ರಾತ್ರಿ ಮನೆಯಿಂದ ಹೊರಗೆ ಹೋದವರು ನಾಪತ್ತೆ ಯಾಗಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಕೊಂಡಿದ್ದ ಜಾವಿದ್ ಕೆ.ಎ. ಅವರಿಗೆ ಬ್ರಹ್ಮಾವರ ಇಂದಿರಾನಗರದ ಗಫೂರ್ ಸಾಹೇಬ್ ಎಂಬವರ ಮಗಳೊಂದಿಗೆ ಜ.21ರಂದು ಮದುವೆ ನಿಶ್ಚಯವಾಗಿತ್ತು. ಜ.18ರಂದು ಸಂಜೆ 7ಗಂಟೆಗೆ ಹಾಸನ ಬೇಲೂರಿನಿಂದ ಇಬ್ಬರು ಜಾವಿದ್‌ನ ಸ್ನೇಹಿತರೆಂದು ಹೇಳಿ ಮನೆಗೆ ಬಂದು ಜಾವೆದ್ ನನ್ನು ವಿಚಾರಿಸಿ ಹೋಗಿದ್ದರು.
ಬಳಿಕ ರಾತ್ರಿ 8ಗಂಟೆಗೆ ಹೊರಗಡೆ ಹೋಗಿದ್ದ ಜಾವಿದ್ ವಾಪಾಸು ಮನೆಗೆ ಬಂದಾಗ ಆತನ ತಂಗಿ ಈ ವಿಚಾರವನ್ನು ತಿಳಿಸಿದಳು. ಅದೇ ವೇಳೆ ಮನೆ ಯಿಂದ ಹೊರಗೆ ಹೋದ ಜಾವೀದ್ ಈವರೆಗೆ ವಾಪಾಸ್ ಬಾರದೇ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.