ಸಮುದ್ರ ಅಲೆಯಲ್ಲಿ ವಿದ್ಯುತ್ ಉತ್ಪಾದನೆ: ಸಚಿವ ಸುರೇಶ್ ಪ್ರಭು ಜೊತೆ ಸಮಾಲೋಚನೆ

Update: 2018-01-21 16:50 GMT

ಉಡುಪಿ, ಜ.21: ಉಡುಪಿಯ ಸುಸಿ ಗ್ಲೋಬಲ್ ರಿಸರ್ಚ್ ಸೆಂಟರಿನ ವಿಜ್ಞಾನಿ ವಿಜಯ್ ಕುಮಾರ್ ಹೆಗ್ಡೆ ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಸಮುದ್ರ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯ ಬಗ್ಗೆ ಸಮಾ ಲೋಚನೆ ನಡೆಸಿದರು.

ದೇಶಕ್ಕೆ ಪರ್ಯಾಯ ಇಂಧನ ವ್ಯವಸ್ಥೆಯ ಅಗತ್ಯ ಇದ್ದು, ಸಂಶೋಧನೆಗಳನ್ನು ಮಾಡುವಂತಹ ಸಂಶೋಧಕರನ್ನು ಸರಕಾರ ಗುರುತಿಸಿ ಪ್ರೋತ್ಸಾಹ ನೀಡಲಾಗು ತ್ತದೆ. ಈ ನಿಟ್ಟಿನಲ್ಲಿ ಸಮುದ್ರದಿಂದ ವಿದ್ಯುತ್ ಉತ್ಪಾದನೆ ಯೋಜನೆ ದೇಶಕ್ಕೆ ಹೆಚ್ಚು ಶಕ್ತಿ ತುಂಬಲಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದರು.

ಈಗಾಗಲೇ ಸಮುದ್ರದ ಅಲೆಗಳಿಂದ ಪ್ರಯೋಗಿಕ ವಿದ್ಯುತ್ ಉತ್ಪಾದಿಸಿ ಯಶಸ್ವಿಯಾಗಿರುವ ವಿಡಿಯೋ ದಾಖಲೆಗಳನ್ನು ಸಚಿವರಿಗೆ ತೋರಿಸಲಾ ಯಿತು. ಮುಂದಿನ ದಿನಗಳಲ್ಲಿ ಕುಂದಾಪುರದ ಮರವಂತೆಯಲ್ಲಿ ಪ್ರಾರಂಭಿಸ ಲಿರುವ ಈ ಯೋಜನೆ ಬಗ್ಗೆ ಮಂಗಳೂರು ಮಾಜಿ ಶಾಸಕ ಯೋಗೀಶ್ ಭಟ್ ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News