ಗಾಂಜಾ ಸೇವನೆ: ಐವರು ವಶಕ್ಕೆ

Update: 2018-01-21 17:13 GMT

ಮಣಿಪಾಲ, ಜ.21: ಪೆರಂಪಳ್ಳಿ ರಸ್ತೆಯಲ್ಲಿರುವ ಮಾಂಡವಿ ಸಫೈರ್ ಕಂಪೌಂಡ್ ಬಳಿ ಜ.19ರಂದು ಸಂಜೆ 7ಗಂಟೆ ಸುಮಾರಿಗೆ ಅಕ್ರಮವಾಗಿ ಗಾಂಜಾ ಸೇವಿಸುತ್ತಿದ್ದ ಐವರನ್ನು ಮಣಿಪಾಲ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.

ಗಾಂಜಾ ಸೇವಿಸುತ್ತಿದ್ದ ಮಾಂಡವಿ ಸಫೈರ್ ಕಂಪೌಂಡ್ ಬಳಿಯ ಗಾಡ್ಸನ್ (20), ಥಾಮಸ್(20), ಶ್ಯಾಮ್(20), ಅಕ್ಷಯ್ ಅರುಣ್(19) ಹಾಗೂ ಪೆರ್ಡೂರಿನ ಜಗದೀಶ್(20) ಎಂಬವರು ಪೊಲೀಸರು ವಶಕ್ಕೆ ತೆಗೆದುಕೊಂಡು ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದ್ದು, ಇದರಿಂದ ಇವರೆಲ್ಲರು ಗಾಂಜಾವನ್ನು ಸೇವನೆ ಮಾಡಿದ್ದಾರೆಂಬುದು ಧೃಢಪಟ್ಟಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News