ಕಾಪು: ಕಳವು ಪ್ರಕರಣದ ಆರೋಪಿಗಳು ಸೆರೆ

Update: 2018-01-21 17:21 GMT

ಕಾಪು, ಜ.21: ಪೊಲಿಪು ಲಕ್ಷ್ಮೆನಾರಾಯಣ ಭಜನಾ ಮಂದಿರದಲ್ಲಿ ಶನಿವಾರ ಮುಂಜಾನೆ ಕಳವಿಗೆ ಯತ್ನಿಸುತ್ತಿದ್ದಾಗ ಸಾರ್ವಜನಿಕರ ಸಹಕಾರದಿಂದ ಬಂಧಿಸಲ್ಪಟ್ಟ ಅಪ್ರಾಪ್ತ ಸಹಿತ ಇಬ್ಬರು ಆರೋಪಿಗಳು ಎಂಟು ಕಳವು ಪ್ರಕರಣ ಹಾಗೂ ಒಂದು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

 ಬಂಧಿತ ಮಟ್ಟಾರು ಬಂಗ್ಲೆಗುಡ್ಡೆ ಜನತಾ ಕಾಲನಿಯ ಗುರುಪ್ರಸಾದ್(22) ಹಾಗೂ ಮಲ್ಲಾರು ಹಳೆ ಕಾಲೇಜು ರಸ್ತೆಯ 17ರ ಹರೆಯದ ಅಪ್ರಾಪ್ತನನ್ನು ಪೊಲೀಸರು ತನಿಖೆಗೆ ಒಳಪಡಿಸಿದಾಗ ಇವರು ಕಾಪು ಜನಾರ್ದನ ದೇವಸ್ಥಾನ, ಸೂಡ ಸುಬ್ರಹ್ಮಣ್ಯ ದೇವಸ್ಥಾನ ಸಹಿತ 8 ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳವು ಪ್ರಕರಣ ಹಾಗೂ ಜ.10ರಂದು ಶಿರ್ವ ಠಾಣಾ ವ್ಯಾಪ್ತಿಯ ಶಾಂತಿಗುಡ್ಡೆ ಮಂದಿರದ ಬಳಿ ಸೋರ್ಪು ನಿವಾಸಿ ರಾಮ ಆಚಾರ್ಯ ಎಂಬವರಿಗೆ ಹಲ್ಲೆ ನಡೆಸಿ ಎಟಿಎಂ ಖಾತೆಯಿಂದ ಹಣ ಡ್ರಾ ಮಾಡಿರುವ ಕೃತ್ಯದಲ್ಲಿ ಭಾಗಿಯಾಗಿ ದ್ದರೆಂಬುದು ತಿಳಿದುಬಂದಿದೆ.

ಬಂಧಿತರಿಂದ ಒಂದು ಬೈಕ್, 3 ಮೊಬೈಲ್ ಹಾಗೂ ಕಬ್ಬಿಣದ ರಾಡು, ಸುತ್ತಿಗೆ ಮತ್ತು ನಗದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ತಂಡದ ಇನ್ನೋರ್ವ ಆರೋಪಿ ಅವಿನಾಶ್ ಪರಾರಿಯಾಗಿದ್ದು, ಆತನನಿಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಬಂಧಿತ ಗುರುಪ್ರಸಾದ್‌ನನ್ನು ಪೋಲೀಸರು ಇಂದು ಉಡುಪಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಾಲಾಪರಾಧಿಯನ್ನು ನಿಟ್ಟೂರಿನ ವೀಕ್ಷಣಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News