×
Ad

ಪೊಲಿಪು: ಮಹಿಳೆಗೆ ಗಾಲಿ ಕುರ್ಚಿ ವಿತರಣೆ

Update: 2018-01-22 19:23 IST

ಕಾಪು, ಜ.22: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ ಅಸೋಸಿ ಯೇಶನ್ ವತಿಯಿಂದ ಪಾರ್ಶ್ವವಾಯು ಪೀಡಿತ ಶಿರ್ವ ಮಂಚಕಲ್ಲಿನ ರೇವತಿ ಆಚಾರ್ಯ ಅವರಿಗೆ ಗಾಲಿ ಕುರ್ಚಿಯನ್ನು ಇತ್ತೀಚೆಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ಇರ್ಷಾದ್ ಸಅದಿ, ಕಾಪು ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್, ಸದರ್ ಉಸ್ತಾದ್ ಅಬ್ದುರ್ರಝಾಕ್ ಅಲ್‌ಖಾಸಿಮಿ, ಜಮಾಅತ್ ಅಧ್ಯಕ್ಷ ಕೆ.ಆಜಬ್ಬ, ಅಸೋಸಿ ಯೇಶನ್ ಅಧ್ಯಕ್ಷ ಬಶೀರ್ ಹುಸೇನ್, ಎಚ್.ಮುಹಮ್ಮದ್ ಹುಸೇನಾರ್, ಕೆ.ಎಂ.ರಝಾಕ್, ಹಮೀದ್ ಪಾಂಗಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News