ಚಂದ್ರನಗರ: ಕ್ರೆಸೆಂಟ್ ಸ್ಕೂಲ್‌ನ ವಾರ್ಷಿಕ ಕ್ರೀಡಾಕೂಟ
Update: 2018-01-22 19:25 IST
ಕಾಪು, ಜ.22: ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಾರ್ಷಿಕ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಇತ್ತೀಚೆಗೆ ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷ ಶಯನ ಕೆ., ಶಿರ್ವ ಪೊಲೀಸ್ ಠಾಣಾಧಿಕಾರಿ ನರಸಿಂಹ ಶೆಟ್ಟಿ, ಶಾಲೆಯ ಆಡಳಿತ ಮಂಡಳಿಯ ಮುಖ್ಯಸ್ಥ ಶಂಶುದ್ದೀನ್, ಯೂಸೂಫ್ ಸಾಹೇಬ್, ವ್ಯವಸ್ಥಾಪಕ ನಿರ್ದೇಶಕಿ ಶಹನಾಝ್ ಸಂಶುದ್ದೀನ್, ಮುಖ್ಯೋಪಾಧ್ಯಾಯಿನಿ ಸ್ಮಿತಾ, ಸಲಹೆಗಾರರಾದ ಕೃಷ್ಣಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.